ಅಗ್ನಿ ಸಾಕ್ಷಿಯ ಸಿದ್ಧಾರ್ಥ್ ಆಗಿ ನಟಿಸಿ ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಪಡೆದಿರುವ ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ಇದೀಗ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಪ್ರೇಮಲೋಕದ ಸೂರ್ಯಕಾಂತ್ ಆಗಿ ಅಭಿನಯಿಸಿ ಹುಡುಗಿಯರ ಮನ ಸೆಳೆದಿರುವ ವಿಜಯ್ ಸೂರ್ಯ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರೋಮ್ಯಾಂಟಿಕ್ ಹೀರೋ ಆಗಿ ಹೆಣ್ಣು ಮಕ್ಕಳ ಮನ ಕದ್ದ ವಿಜಯ್ ಸೂರ್ಯ ಇದೀಗ ತಮ್ಮ ಸಿದ್ಧಾರ್ಥ್ ಹೆಸರಿನಲ್ಲೇ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಬದುಕಿನಲ್ಲಿ ಆಗುವ ಬದಲಾವಣೆಗಳನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಈ ಸಿನಿಮಾದಲ್ಲಿ ಹಾಡಾಗಲಿ, ಡ್ಯಾನ್ಸಾಗಲಿ, ಫೈಟಾಗಲಿ ಇಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ವಿಶೇಷ ಸ್ಕ್ರೀನ್ ಪ್ಲೇ ಇರುವ ಚಿತ್ರವಿದು ಎನ್ನುತ್ತಾರೆ ವಿಜಯ್ ಸೂರ್ಯ.
ಕಿರುತೆರೆಯಲ್ಲಿ ಸಿದ್ಧಾರ್ಥ್ ಆಗಿ ಮೋಡಿ ಮಾಡಿರುವ ಗುಳಿಕೆನ್ನೆಯ ಚೆಲುವನಿಗೆ ಬೆಳ್ಳಿತೆರೆ ಹೊಸದೇನಲ್ಲ. ಕ್ರೇಜಿಲೋಕದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ವಿಜಯ್ ಮುಂದೆ ಇಷ್ಟ ಕಾಮ್ಯ, ಕದ್ದುಮುಚ್ಚಿ, ಲಖನೌ ಟು ಮುಂಬೈ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.