ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿ ಜನರಿಗೆ ತೋರಿಸುವುದು ಸರ್ವೇ ಸಾಮಾನ್ಯ. ಆದರೆ, ಉದಯ ಟಿವಿಯಲ್ಲಿ ಈ ಸಲದ ಗಣೇಶ ಹಬ್ಬ ಬಹಳ ವಿಶೇಷವಾಗಿದೆ. ಅಂದ್ರೆ ಗಣೇಶ ಚತುರ್ಥಿ ಧಾರಾವಾಹಿಗಳ ಕಥೆಯ ತಿರುವಿಗೆ ಕಾರಣವಾಗಿದೆ.
ಇದೇ ಸೊಮವಾರದಿಂದ ಗಣೇಶ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ವಕ್ರತುಂಡ ಹಾಗೂ ದೇವಯಾನಿ ಧಾರಾವಾಹಿಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ. ವಿಶೇಷ ದಿನಗಳಲ್ಲಿ ಸದಾ ಹೊಸತನದೊಂದಿಗೆ ಬರುವ ಸೇವಂತಿ ಧಾರಾವಾಹಿ, ಇದೀಗ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನ ಹೊತ್ತು ತಂದಿದೆ.
ಗಣೇಶ ಚತುರ್ಥಿಗಾಗಿ ಕ್ಷಮಾಬ ಧಾರಾವಾಹಿಯಲ್ಲಿ ವಿಶೇಷ ಸಂಚಿಕೆಯನ್ನು ಮಾಡಿದ್ದು, ಯಾವಾಗಲೂ ಕಷ್ಟವನ್ನೇ ಅನುಭವಿಸುವ ಕ್ಷಮಾಳ ಬದುಕಲ್ಲಿ ಗಣಪತಿ ಅರ್ಚನೆಯಿಂದ ವಿಘ್ನಗಳೆಲ್ಲ ಪರಿಹಾರವಾಗಿ ಅವಳ ಜೀವನ ಸುಖಮಯವಾಗುತ್ತಾ? ಅವಳ ಹೋರಾಟದ ಬದುಕಿಗೆ ನ್ಯಾಯ ಸಿಗತ್ತಾ? ಎಂಬುದನ್ನ ಕಾದು ನೋಡಬೇಕಾಗಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಇದನ್ನ ಗಮನಿಸಿದರೆ ವೀಕ್ಷಕರಿಗೆ ಹಬ್ಬಕ್ಕೆ ಫುಲ್ ಅಂಡ್ ಫುಲ್ ಮನರಂಜನೆ ನೀಡುವುದು ಗ್ಯಾರಂಟಿ ಎನಿಸುತ್ತದೆ.