ಬಿಗ್ಬಾಸ್ 8: ಮೂರನೇ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು ಇವರೇ - Aravind is Caption for 3rd week
ದೊಡ್ಮನೆಯಲ್ಲಿ ಸ್ಪರ್ಧಿಗಳು ಬಹಲ ಲವಲವಿಕೆಯಿಂದ ಟಾಸ್ಕ್ನಲ್ಲಿ ಭಾಗವಹಿಸುತ್ತಿದ್ದಾರೆ. ಟಾಸ್ಕ್ನಲ್ಲಿ ಗೆದ್ದು ಬೈಕ್ ರೇಸರ್ ಅರವಿಂದ್ ಮೂರನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಬಿಗ್ಬಾಸ್ ಸೀಸನ್ 8 ಮೂರನೇ ವಾರದ ಕ್ಯಾಪ್ಟನ್ ಆಗಿ ಬೈಕ್ ರೇಸರ್ ಅರವಿಂದ್ ಆಯ್ಕೆ ಆಗಿದ್ದಾರೆ. ನಿನ್ನೆ ಸ್ಪರ್ಧಿಗಳಿಗೆ ಜೀವನದಲ್ಲಿ ತಿರುವು ನೀಡಿದವರ ಬಗ್ಗೆ ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಕ್ಯಾಪ್ಟನ್ ಆದ ನಂತರ ತಮ್ಮ ಹಳೆಯ ದಿನಗಳನ್ನು ನೆನೆದು ಅರವಿಂದ್ ಕಣ್ಣೀರು ಹಾಕಿದರು.
ಅರವಿಂದ್ ಮಾತನಾಡಿ, ಬೆಂಗಳೂರಿಗೆ ಬಂದಾಗ ಹಾಸ್ಟೆಲ್ ಪಕ್ಕದಲ್ಲಿ ಒಂದು ಆಟೋ ಮೊಬೈಲ್ ಸ್ಪೇರ್ ಶಾಪ್ ಇತ್ತು. ನನ್ನ ರೈಡ್ಗೆ 2005ರಲ್ಲಿ ಅವರೇ ಸ್ಪಾನ್ಸರ್ ಮಾಡಿದ್ದರು. ಇದು ನನ್ನ ಜೀವನದ ದೊಡ್ಡ ತಿರುವು. ಅವರು ಇಲ್ಲ ಎಂದರೆ ನಾನು ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ಭಾವುಕರಾದರು. ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ನಲ್ಲಿ ರಾಜೀವ್ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿ ಗೆದ್ದಿದ್ದರು. ಇದು ಕ್ಯಾಪ್ಟನ್ಸಿ ಟಾಸ್ಕ್ಗೆ ಸಹಾಯ ಮಾಡಿತು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ದಿವ್ಯಾ ಸುರೇಶ್, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್ಗೆ ಆಯ್ಕೆ ಆಗಿದ್ದರು.ಯು ಆಕಾರದ ಅಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್. ಈ ಮೂಲಕ ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.
ದಿವ್ಯಾ ಲವ್ಸ್ ಮಂಜು
ದಿವ್ಯಾ ಸುರೇಶ್ ಹಾಗೂ ಮಂಜು ರೊಮ್ಯಾನ್ಸ್ ಮೂರನೇ ವಾರವೂ ಮುಂದುವರಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್ಪೆನ್ನಿಂದ 'ಮಂಜು ಲವ್ಸ್ ದಿವ್ಯಾ' ಎಂದು ಬರೆದುಕೊಂಡರು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದು ತೋರಿಸಿದಾಗ ವಿಶ್ವನಾಥ್ ನಾಚಿಕೊಂಡರು.
ಇದನ್ನೂ ಓದಿ: ರಾಬರ್ಟ್ ಯಶಸ್ಸು: ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ದರ್ಶನ್
ಶಂಕರ್ ಅಶ್ವತ್ಥ್ ಹಾಗೂ ಶಮಂತ್
ಮತ್ತೊಂದೆಡೆ ಶಂಕರ್ ಅಶ್ವತ್ಥ್ ಹಾಗೂ ಶಮಂತ್ ಕುಸ್ತಿಗೆ ಇಳಿದಿದ್ದರು. ಆದರೆ ಇದು ಫನ್ಗಾಗಿ ಮಾಡಿದ ಜಗಳ ಆಗಿತ್ತು. ಈ ಜಗಳದಲ್ಲಿ ಶಂಕರ್ ಅಶ್ವತ್ಥ್ ನೆಲಕ್ಕೆ ಬಿದ್ದವರಂತೆ ನಾಟಕ ಮಾಡಿದರೆ ನಂತರ ಶಮಂತ್ ನೆಲಕ್ಕೆ ಬಿದ್ದರು. ಇವರ ಫೈಟ್ ನಡೆಯುವಾಗ ಮನೆ ಮಂದಿಯೆಲ್ಲಾ ಕುಳಿತು ಮನರಂಜನೆ ಪಡೆಯುತ್ತಿದ್ದು. ಕೆಲವರು ಶಂಕರ್ ಅಶ್ವತ್ಥ್ ಅವರಿಗೆ ಚಿಯರ್ಸ್ ಎಂದರೆ ಮತ್ತೆ ಕೆಲವರು ಶಮಂತ್ಗೆ ಜೈ ಎಂದರು.