ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಸೀಸನ್ 4 ಈ ವಾರ ಕೊನೆಗೊಳಲಿದೆ. ಈ ಬಾರಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತ್ತು.
ಗುರುವಾರ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ಈ ಸಂಚಿಕೆಯ ಗ್ರಾಂಡ್ ಫಿನಾಲೆಯಲ್ಲಿ 6 ಮಂದಿ ಜನಪ್ರಿಯ ವಾಕ್-ಇನ್ ಅತಿಥಿಗಳು ಮತ್ತು 6 ಮಂದಿ ಗಮನಾರ್ಹ ಸಾಧಕರು ಅತಿಥಿಗಳಾಗಿದ್ದಾರೆ.ಈ ಸೀಸನ್ಗೆ ಪ್ರೇಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದೆ. ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಪ್ರಮುಖ ತಾರೆಗಳಾದ ಗಂಗಾವತಿ ಪ್ರಾಣೇಶ್, ವಿಜಯ್ ರಾಘವೇಂದ್ರ , ಸಂತೋಷ್ ಹೆಗ್ಡೆ, ಪ್ರಕಾಶ್ ಬೆಳವಾಡಿ, ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ವಾಕ್-ಇನ್ ಅತಿಥಿಗಳಾಗಿ ಹಾಗೂ ಗಿರೀಶ್ ಗೌಡ, ನಿರಂಜನ್ ಮುಕುಂದನ್, ಕವಿತಾ ಮಿಶ್ರಾ, ವಿಲಾಸ್ ನಾಯಕ್ ಮತ್ತು ನಿವೇದನ್ ನಿಂಪೆ ಇತರ ಸ್ಫೂರ್ತಿದಾಯಕ ಸಾಧಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಂತಿಮ ಸಂಚಿಕೆಯಲ್ಲಿ ವಾಕ್ ಇನ್ ಸೆಲೆಬ್ರಿಟಿಗಳಿಂದ ಸೀಸನ್ 5 ರ ಸಲಹೆಗಳು ಮತ್ತು ಪ್ರೇಕ್ಷಕರಿಂದ ಹಲವಾರು ಆಸಕ್ತಿದಾಯಕ ಪ್ರಶ್ನೆಗಳು ಕೂಡಿವೆ. ಈ ಸಂಚಿಕೆಗೆ ಸಂಬಂಧಿಸಿದ ಮತ್ತೊಂದು ನವೀನ ಪರಿಕಲ್ಪನೆ ಎಂದರೆ ಹ್ಯಾಂಡ್ ಶೇಕ್ ವಿತ್ ರಮೇಶ್. ಈ ಸಂಚಿಕೆ ಜುಲೈ 13 ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.