ಹೈದರಾಬಾದ್: ದೇಶಾದ್ಯಂತ ಲಾಕ್‍ಡೌನ್ 3.0 ಮುಂದುವರಿದಿದ್ದು, ಇದರ ಮಧ್ಯೆ ಸರಳವಾಗಿ ಕೆಲ ಸೆಲಿಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದು, ಇದೀಗ ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್ನ ಯಂಗ್ ಹೀರೋ ಎಂದೇ ಗುರುತಿಸಿಕೊಂಡಿದ್ದ ನಿಖಿಲ್ ಸಿದ್ಧಾರ್ಥ್ ಹ್ಯಾಪಿಡೇಸ್ ಎಂಬ ಚಿತ್ರದ ಮೂಲಕ ಗುರುತಿಸಿಕೊಂಡಿದ್ದರು. ಭೀಮಾವರಂ ಮೂಲದ ಪಲ್ಲವಿ ವರ್ಮಾ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಹೈದರಾಬಾದ್‍ನ ಶಮೀರ್‌ಪೇಟೆಯಲ್ಲಿನ ಫಾರೆಸ್ಟ್ ರಿಡ್ಜ್ ವಿಲ್ಲಾದಲ್ಲಿ ಕಾರ್ಯಕ್ರಮ ನಡೆದಿದೆ.
![Telugu Actor Nikhil Siddhartha](https://etvbharatimages.akamaized.net/etvbharat/prod-images/7189229_1_1405newsroom_1589464376_393.jpg)
ಹಿಂದೂ ಸಂಪ್ರದಾಯದಂತೆ ಗುರುಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ಫೆ. 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಹಿಂದೆ ಏಪ್ರಿಲ್ 16ರಂದು ನಿಖಿಲ್- ಪಲ್ಲವಿ ಮದುವೆ ನಿಶ್ಚಯವಾಗಿತ್ತು. ಆದರೆ, ಲಾಕ್‍ಡೌನ್ ಕಾರಣ ಮುಂದೂಡಿಕೆಯಾಗಿತ್ತು. ಇದೀಗ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
![Telugu Actor Nikhil Siddhartha](https://etvbharatimages.akamaized.net/etvbharat/prod-images/7189229_3_1405newsroom_1589464376_383.jpg)
ಲಾಕ್‍ಡೌನ್ ನಿಯಮ ಪಾಲನೆ ಮಾಡಿ ಸರಳವಾಗಿ ವಿವಾಹವಾಗಿದ್ದು, ಸೀಮಿತ ಬಂಧು-ಬಳಗ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
![Telugu Actor Nikhil Siddhartha](https://etvbharatimages.akamaized.net/etvbharat/prod-images/7189229_5_1405newsroom_1589464376_549.jpg)