'ಮಹಾದೇವಿ' ಎಂಬ ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಜಾಜಿ ಪಾತ್ರ ಮಾಡಿ ಜನ ಮನ ಗೆದ್ದ ನಟಿ ಪದ್ಮಿನಿ ದೇವನಹಳ್ಳಿ ನಟ ಅಜಯ್ ರಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೆಲವೇ ಕೆಲವು ಮಂದಿ ಭಾಗವಹಿಸಿದ್ದರು ಎನ್ನಲಾಗಿದೆ. ಕಳೆದ ವರ್ಷ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಅಜಯ್‌ರಾಜ್ ಮುಕ್ತ ಧಾರಾವಾಹಿ ಮೂಲಕ ಗಮನ ಸೆಳೆದು, ನಂತರ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ.
ಅಜಯ್ ರಾಜ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವರ ನಟನೆಯ 'ಮುಂದಿನ ನಿಲ್ದಾಣ' ಸಿನಿಮಾ ರಿಲೀಸ್ ಆಗಿತ್ತು. 'ಮುಂದುವರೆದ ಅಧ್ಯಾಯ' ಸಿನಿಮಾದಲ್ಲಿ ಇವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.