ಬೈಕ್ ಮೇಲಿಂದ ಬಿದ್ದು ಕಾಲಿವುಡ್ ಸ್ಟಾರ್ ವಿಶಾಲ್ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಈ ಅನಾಹುತ ನಡೆದಿದೆ.
ಸುಂದರ್.ಸಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ವಿಶಾಲ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದೆ. ನಿನ್ನೆಯಷ್ಟೆ ಬೈಕ್ ಸ್ಟಂಟ್ನ ಕೆಲ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಅಚಾನಕ್ ಆಗಿ ವಿಶಾಲ್ ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಕೆಳಗೆ ಬಿದ್ದಿರುವ ನಟನಿಗೆ ಎಡ ಭಾಗದ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
![Actor Vishal](https://etvbharatimages.akamaized.net/etvbharat/images/img-20190328-wa00221553757708988-91_2803email_00205_512.jpg)
50 ದಿನಗಳ ಕಾಲ ಟರ್ಕಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಚಿತ್ರನಟಿ ತಮನ್ನಾ ಸೇರಿದಂತೆ ಚಿತ್ರತಂಡ ಅಲ್ಲಿಯೇ ಬೀಡು ಬಿಟ್ಟಿದೆ. ಸದ್ಯ ವಿಶಾಲ್ ವಿಶ್ರಾಂತಿ ಪಡೆಯಲಿದ್ದು, ಮುಂದಿನ ದಿನಗಳಲ್ಲಿ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.