ETV Bharat / sitara

ಬಿಗ್​​ಬಾಸ್ ಮನೆಯಿಂದ ಕಿಚನ್​​​​​ಗೆ ದರ್ಬಾರ್ ಮಾಡಲು ಬಂದ ಸುಜಾತಾ - ಅಡುಗೆ ಕಾರ್ಯಕ್ರಮಕ್ಕೆ ಸುಜಾತಾ ವಾಪಸ್​​​​

ಬಿಗ್​​ಬಾಸ್​​​​ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ 'ಕಿಚನ್ ದರ್ಬಾರ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.

Sujata akshaya
ಸುಜಾತಾ ಅಕ್ಷಯ
author img

By

Published : Dec 3, 2019, 11:41 PM IST

'ರಾಧಾ ರಮಣ' ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಸಿತಾರಾ ದೇವಿ ಎಂದೇ ಜನಪ್ರಿಯವಾಗಿದ್ದ ಸುಜಾತಾ ಅಕ್ಷಯಾ ಬಿಗ್ ಬಾಸ್​​​ನಿಂದ ಹೊರಬಂದಿದ್ದಾರೆ. ಬಿಗ್​ಬಾಸ್ ಮನೆಗೆ ಹೋದ ಹೊಸತರಲ್ಲಿ ಸುಜಾತ ತಮಗೆ ನೀಡಿದ್ದ ಟಾಸ್ಕ್​​​​ಗಳನ್ನು ಚೆನ್ನಾಗಿ ಮಾಡುತ್ತಿದ್ದರು. ಆದರೆ ಟಾಸ್ಕ್​ ಒಂದರಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಸುಜಾತಾ ನಂತರ ಯಾವ ಟಾಸ್ಕ್​​​​​ಗಳನ್ನು ಮಾಡಲಾಗದೆ ಎಲಿಮಿನೇಟ್ ಆಗಿದ್ದರು.

Kitchen darbar
ಕಿಚನ್ ದರ್ಬಾರ್

ಇನ್ನು ಅಡುಗೆ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸುಜಾತಾ ದೊಡ್ಮನೆಯಲ್ಲಿ ಕೂಡಾ ಅಡುಗೆ ಕೋಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಇದೀಗ ಬಿಗ್​​​​​ಬಾಸ್​​​ನಿಂದ ಎಲಿಮಿನೇಟ್ ಆದ ನಂತರವೂ ಸುಜಾತಾ ಮತ್ತೆ ಕಿಚನ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​​​ಬಾಸ್ ಮನೆಯಿಂದ ಹೊರಬಂದ 2-3 ದಿನಗಳ ನಂತರ, ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಗ್​​ಬಾಸ್​​​​ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಆದರೆ ಬಿಗ್​​​​ಬಾಸ್​​​ನಲ್ಲಿ ಅವಕಾಶ ಸಿಕ್ಕಾಗ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.

ಬಿಗ್​​ಬಾಸ್​​​ನಿಂದ ಹೊರಬಂದ ನಂತರ ಸುಜಾತಾ ಅವರಿಗೆ ಅಡುಗೆ ಕಾರ್ಯಕ್ರಮದ ಜೊತೆಗೆ ಹೊಸ ಧಾರಾವಾಹಿಗಳಲ್ಲಿ ಅಭಿನಯಿಸುವಂತೆ ಸಾಲು ಸಾಲು ಆಫರ್​​​​​ಗಳು ಬರುತ್ತಿವೆಯಂತೆ. ಆದರೆ ಕುಟುಂಬದವರೊಂದಿಗೆ ಕೆಲವು ದಿನಗಳು ಕಾಲ ಕಳೆಯುವ ಸಲುವಾಗಿ ಯಾವ ಕಾರ್ಯಕ್ರಮವನ್ನೂ ಅವರು ಒಪ್ಪಿಕೊಂಡಿಲ್ಲವಂತೆ.

Intro:Body:ರಾಧಾ ರಮಣ ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಸಿತಾರಾ ದೇವಿ ಎಂದೇ ಜನಪ್ರಿಯವಾಗಿದ್ದ ಸುಜಾತಾ ಅಕ್ಷಯಾ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸುಜಾತಾ ಮೊದಲೆಲ್ಲಾ ಉತ್ತಮ ಆಟಗಾರಳಾಗಿ ಮಿಂಚಿದ್ದರು. ಜೊತೆಗೆ ಅಡುಗೆಯಲ್ಲಿ ಪರಿಣಿತಿ ಹೊಂದಿರುವ ಸುಜಾತಾ ಅವರು ದೊಡ್ಮನೆಯಲ್ಲೂ ಅಡುಗೆ ಕೋಣೆಯ ಮೇಲುಸ್ತುವಾರಿ ಯನ್ನು ಪಡೆದುಕೊಂಡಿದ್ದರು.

ಆದರೆ ಯಾವುದೋ ಒಂದು ಟಾಸ್ಕ್ ಆಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡ ಸುಜಾತಾ ಅವರು ಅಡುಗೆ ಮನೆಗೆ ಬಾಯ್ ಹೇಳಿದರು. ಜೊತೆಗೆ ಕೊಂಚ ಸೈಲೆಂಟ್ ಆಗಿದ್ದ ಸುಜಾತಾ ಟಾಸ್ಕ್ ಗಳನ್ನು ಕೂಡಾ ಸರಿಯಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿರುವ ಸುಜಾತಾ ವೀಕ್ಷಕರಿಗೆ ಮತ್ತೆ ಕಾಣಿಸಿಕೊಂಡಿದ್ದು ಕಿಚನ್ ನಲ್ಲಿ!

ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸುಜಾತಾ ಒಂದೆರಡು ದಿನಗಳ ಕಾಲ ಸುಮ್ಮನಿದ್ದು ಇದೀಗ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾಗಿದೆ. ಅದು ಕೂಡಾ ಕಿಚನ್ ಗಾಗಿ! ಅರ್ಥಾತ್ ಕಿಚನ್ ದರ್ಬಾರ್ ಎಂದು ಕುಕ್ಕರಿ ಶೋ ವಿನ ನಿರೂಪಕರಾಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ದಿನ ಮದ್ಯಾಹ್ನ ಪ್ರಸಾರವಾಗುತ್ತಿರುವ ಕುಕ್ಕರಿ ಶೋ ಕಿಚನ್ ದರ್ಬಾರ್' ಎಂಬ ಕಾರ್ಯಕ್ರಮದ ನಿರೂಪಕರಾಗಿ ಸುಜಾತಾ ಕಾಣಿಸಿಕೊಂಡಿದ್ದರು. ಅದ್ಯಾವಾಗ ಬಿಗ್ ಬಾಸ್ ಮಬೆಯೊಳಗೆ ಹೋಗುವ ಅವಕಾಶ ಒದಗಿ ಬಂದಿತೋ ಆಗ ಅಸ್ತು ಎಂದ ಸುಜಾತಾ ಕಿಚನ್ ದರ್ಬಾರ್' ಕಾರ್ಯಕ್ರಮದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ 'ಬಿಗ್ ಬಾಸ್ ಶೋದಿಂದ ಸುಜಾತ ಎಲಿಮಿನೇಟ್ ಆಗಿದ್ದು ಮತ್ತೆ ತಮ್ಮ ನಿರೂಪಣೆಯ ಕಾರ್ಯಕ್ಕೆ ಹಾಯ್ ಎಂದಿದ್ದಾರೆ.

ಇದರ ಜೊತೆಗೆ ದೊಡ್ಮನೆಯಿಂದ ಹೊರ ಬಂದ ಮೇಲೆ ಹೊಸ ಹೊಸ ಧಾರಾವಾಹಿಗಳಲ್ಲಿ ಅಭಿನಯಿಸುವಂತೆ ಸಾಲು ಸಾಲು
ಆಫರ್ ಗಳು ಸುಜಾತಾ ಅವರನ್ನು ಅರಸಿ ಬರುತ್ತಿದೆ. ಆದರೆ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುವ ಸಲುವಾಗಿ ಯಾವುದನ್ನು ಅವರು ಒಪ್ಪಿಕೊಂಡಿಲ್ಲ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.