ETV Bharat / sitara

ಪ್ರೀತಿ ಶ್ರೀನಿವಾಸ್ ಜಾಗಕ್ಕೆ ನಿರೂಪಕಿಯಾಗಿ ಬಂದ್ರು ಸುಜಾತಾ ಅಕ್ಷಯ - Star Suvarna channel Suvarna sankalpa

ಪ್ರೀತಿ ಶ್ರೀನಿವಾಸ್ ನಡೆಸಿಕೊಡುತ್ತಿದ್ದ 'ಸುವರ್ಣ ಸಂಕಲ್ಪ' ಕಾರ್ಯಕ್ರಮವನ್ನು ಇನ್ಮುಂದೆ ಸುಜಾತಾ ಅಕ್ಷಯ ನಡೆಸಿಕೊಡಲಿದ್ದಾರೆ. ನಿರೂಪಣೆಯೊಂದಿಗೆ 'ಸರಸು' ಹಾಗೂ 'ಹೂಮಳೆ' ಧಾರಾವಾಹಿಯಲ್ಲಿ ಕೂಡಾ ಸುಜಾತಾ ನಟಿಸುತ್ತಿದ್ದಾರೆ.

Sujata is anchor for new show
ಹೊಸ ಕಾರ್ಯಕ್ರಮದ ನಿರೂಪಕಿಯಾಗಿ ಸುಜಾತಾ
author img

By

Published : Nov 16, 2020, 7:08 AM IST

ಸುಜಾತಾ ಅಕ್ಷಯ ಕಿರುತೆರೆ ವೀಕ್ಷಕರಿಗೆ ಪರಿಚಿತ ಹೆಸರು. 'ರಾಧಾರಮಣ' ಧಾರಾವಾಹಿ ಮೂಲಕ ಸಿತಾರಾ ದೇವಿಯಾಗಿ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಿದ ಸುಜಾತಾ, ' ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೂಡಾ ನಟಿಸಿದ್ದರು. ಬಿಗ್​​ಬಾಸ್​​ನಿಂದ ಬಂದ ನಂತರ ಅಡುಗೆ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ ಸುಜಾತಾ ಇದೀಗ ಮತ್ತೆ ಕಾರ್ಯಕ್ರಮವೊಂದನ್ನು ನಿರೂಪಿಸುತ್ತಿದ್ದಾರೆ.

Sujata is anchor for new show
ಸುಜಾತಾ ಅಕ್ಷಯ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾದ 'ಸರಸು' ಧಾರಾವಾಹಿಯಲ್ಲಿ ಸುಜಾತಾ ನಾಯಕನ ಚಿಕ್ಕಮ್ಮ ಆಗಿ ಕೂಡಾ ನಟಿಸುತ್ತಿದ್ದಾರೆ. ಇದರ ಜೊತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ 'ಹೂಮಳೆ'ಯಲ್ಲಿ ಕಾರ್ಪೋರೇಟರ್ ಕಾವೇರಿಯಾಗಿ ಸುಜಾತಾ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಗಳೊಂದಿಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾದ 'ಸುವರ್ಣ ಸಂಕಲ್ಪ' ಕಾರ್ಯಕ್ರಮವನ್ನು ಇನ್ಮುಂದೆ ಸುಜಾತಾ ನಡೆಸಿಕೊಡಲಿದ್ದಾರೆ. 'ಸುವರ್ಣ ಸಂಕಲ್ಪ' ಆರಂಭದ ಸಂಚಿಕೆಗಳಲ್ಲಿ ಪ್ರೀತಿ ಶ್ರೀನಿವಾಸ್ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಕಾರಣಾಂತರಗಳಿಂದ ಪ್ರೀತಿ ಬದಲಾಗಿದ್ದು ಆ ಜಾಗಕ್ಕೆ ಸುಜಾತಾ ಬಂದಿದ್ದಾರೆ. ಸುಜಾತಾಗೆ ನಿರೂಪಣೆ ಹೊಸದೇನಲ್ಲ. 'ಕಾಮಿಡಿ ಟೈಮ್' ನಿರೂಪಕಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಸುಜಾತಾ, ಪಾಕಶಾಲೆ, ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮಗಳ ನಿರೂಪಣೆ ಕೂಡಾ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.