ETV Bharat / sitara

'ನನಗೆ ಅಪ್ಪ - ಅಮ್ಮ ಇಲ್ಲ, ಈಗ ನನ್ನ ಕುಟುಂಬ ದೊಡ್ಡದಾಗಿ​ದೆ'... ಕಣ್ಣೀರು ಸುರಿಸಿದ ಸೋನ್ ಸೂದ್​- ವಿಡಿಯೋ

ರಿಯಾಲಿಟಿ ಶೋನಲ್ಲಿ ನಟ ಸೋನು ಸೂದ್​ ಅವರು, ''ನನಗೆ ತಂದೆ-ತಾಯಿ ಇಲ್ಲ. ಎಲ್ಲಿಂದಲೋ ಏನೋ ಇಂದು ನನ್ನ ಕುಟುಂಬ ಇಷ್ಟೊಂದು ದೊಡ್ಡದಾಗಿದೆ. ನಿನ್ನ ಹಳ್ಳಿಗೆ ಹೋಗಿ ಹೇಳು, ಲಾಕ್​ಡೌನ್​ ಎಲ್ಲಿವರೆಗೂ ಆದರೂ ಇರಲ್ಲಿ. ಒಂದು ತಿಂಗಳ ತನಕ ಇರಲಿ, ಎರಡು ತಿಂಗಳು ತನಕ ಇರಲಿ. ಎಲ್ಲಿವರೆಗೆ ಆದರೂ ಇರಲಿ. ನಿಮ್ಮ ಇಡೀ ಹಳ್ಳಿಗೆ ನನ್ನ ಕಡೆಯಿಂದ ಆಹಾರ ಪದಾರ್ಥ ಬರುತ್ತಲೇ ಇರುತ್ತದೆ'' ಎಂದು ಹೇಳಿದ್ದು, ವಿಡಿಯೋದಲ್ಲಿದೆ.

Sonu Sood
Sonu Sood
author img

By

Published : May 24, 2021, 5:46 PM IST

ಮುಂಬೈ: ಖಾಸಗಿ ಮನೋರಂಜೆನ ವಾಹಿನಯ ಡ್ಯಾನ್ಸ್ ದಿವಾನೆ ರಿಯಾಲಿ ಶೋ ಎಪಿಸೋಡ್ ಚಿತ್ರೀಕರಣದ ಸೆಟ್‌ನಲ್ಲಿ ನಟ ಸೋನು ಸೂದ್ ಕಣ್ಣೀರು ಹಾಕಿದ ಘಟನೆ ನಡೆದಿದೆ.

ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಭಾರ್ತಿ ಎಂಬ ಮಹಿಳೆಯನ್ನು ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಹೇಗೆ ಕರೆದೊಯ್ಯಲಾಯಿತು ಎಂಬದನ್ನು ನೃತ್ಯದ ಮೂಲಕ ಪ್ರದರ್ಶನ ನೀಡಲಾಯಿತು. ಇದನ್ನು ನೋಡಿದ ನಟ ಸೋನು ಸೂದ್ ಕಣ್ಣೀರು ಹಾಕಿದರು.

ಶ್ವಾಸಕೋಶಗಳನ್ನು ಕಳೆದುಕೊಂಡಿದ್ದ 25 ವರ್ಷದ ಯುವತಿ ಭಾರ್ತಿಯನ್ನು ಸೋನು ಸೂದ್ ಅವರ ಸಹಾಯದಿಂದ ನಾಗ್ಪುರದ ವೋಕ್ಹಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಶ್ವಾಸಕೋಶದ ವಿಶೇಷ ಚಿಕಿತ್ಸೆಯ ಅಗತ್ಯವಿದ್ದು, ಹೈದರಾಬಾದ್​ನ ಅಪೊಲೋ ಆಸ್ಪತ್ರೆಯಲ್ಲಿ ಮಾತ್ರ ಈ ಚಿಕಿತ್ಸೆ ಕೊಡಿಸಲು ಏಪ್ರಿಲ್​ನಲ್ಲಿ ಏರ್ ಲಿಫ್ಟ್ ಮಾಡಿದ್ದರು.

ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರೋಮೋ ಒಂದರಲ್ಲಿ, ಭಾರ್ತಿ ಅವರ ಕುಟುಂಬ ಸದಸ್ಯರು ಸೋನು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಅವರು ಅವನಿಗೆ ಧನ್ಯವಾದ ಹೇಳುತ್ತಿದ್ದಂತೆ ಆಕೆಯ ತಾಯಿ ಭಾವುಕರಾದರು. ಕುಟುಂಬದ ಮತ್ತೊಬ್ಬ ಸದಸ್ಯ, "ಸರ್ ಹುಮಾರೆ ಲಿಯೆ ಫರಿಶೆಟ್​ ಹೈ" (ಅವರು ನಮಗೆ ದೇವತೆ) ಎಂದು ಹೇಳಿದ್ದು, ನಟನಲ್ಲಿ ಕಣ್ಣೀರು ತರಿಸುವಂತೆ ಮಾಡಿತು.

ನನಗೆ ತಂದೆ - ತಾಯಿ ಇಲ್ಲ. ಎಲ್ಲಿಂದಲೋ ಏನೋ ಇಂದು ನನ್ನ ಕುಟುಂಬ ಇಷ್ಟೊಂದು ದೊಡ್ಡದಾಗಿದೆ. ನಿನ್ನ ಹಳ್ಳಿಗೆ ಹೋಗಿ ಹೇಳು, ಲಾಕ್​ಡೌನ್​ ಎಲ್ಲಿವರೆಗೂ ಆದರೂ ಇರಲಿ, ಒಂದು ತಿಂಗಳ ತನಕ ಇರಲಿ, ಎರಡು ತಿಂಗಳು ತನಕ ಇರಲಿ. ಎಲ್ಲಿವರೆಗೆ ಆದರೂ ಇರಲಿ. ನಿಮ್ಮ ಇಡೀ ಹಳ್ಳಿಗೆ ನನ್ನ ಕಡೆಯಿಂದ ಆಹಾರ ಪದಾರ್ಥ ಸಿಗುತ್ತಲೇ ಇರುತ್ತದೆ ಎಂದು ಹೇಳಿದ್ದು ವಿಡಿಯೋದಲ್ಲಿದೆ.

ಕಳೆದ ವರ್ಷದಿಂದ ಕೋವಿಡ್ -19 ಪರಿಹಾರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಸೋನು, ಇತ್ತೀಚೆಗೆ ತನ್ನ ಫೋನ್‌ನಲ್ಲಿ ನಿರಂತರವಾಗಿ ಕೋವಿಡ್​ ಮಾರ್ಗಸೂಚಿ, ಆರೋಗ್ಯ ಸಂಬಂಧಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಂಕಷ್ಟದ ಯಾತನೆ ಸಂದೇಶಗಳು ಸುರಿಯುತ್ತಿದ್ದಂತೆ. ಜನರು ಮುಂದೆ ಬಂದು ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

100 ಕೋಟಿ ಸಿನಿಮಾ ಮಾಡುವುದಕ್ಕಿಂತ ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸರಬರಾಜು ಮತ್ತು ಜೀವ ಉಳಿಸುವ ಔಷಧಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವುದು ಹೆಚ್ಚು ಲಾಭದಾಯಕವಾಗಿದೆ ಎಂದು ಕಳೆದ ವಾರ ಸೋನು ಹೇಳಿದ್ದರು.

ಕೋವಿಡ್ -19 ಸೋಂಕಿಗೆ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಬರಬೇಕೆಂದು ಸೋನು ಅವರು ಸರ್ಕಾರ ಮತ್ತು ಸಂಘ ಸಂಸ್ಥೆಗಳಿಗೆ ಮನವಿ ಮಾಡಿ, ಅವರಿಗೆಲ್ಲ ಉಚಿತ ಶಿಕ್ಷಣ ನೀಡಬೇಕು ಎಂದು ವಿನಂತಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.