ಕನ್ನಡ ಕಿರುತೆರೆ ನಟಿ ಐಶ್ವರ್ಯ ಪಿಸ್ಸೆಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇವರು ಮೈಸೂರಿನ ಹರಿ ವಿನಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ನಡೆದ ವಿವಾಹ ಸಮಾರಂಭಕ್ಕೆ ಬಂಧುಮಿತ್ರ ಹಾಗೂ ಆಪ್ತರಷ್ಟೆ ಪಾಲ್ಗೊಂಡು ನವಜೋಡಿಗೆ ಶುಭಕೋರಿದ್ದಾರೆ.
'ಅನುರೂಪ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಐಶ್ವರ್ಯ, ನಂತರ 'ಪುನರ್ ವಿವಾಹ', 'ಗಿರಿಜಾ ಕಲ್ಯಾಣ' ಧಾರಾವಾಹಿಗಳಲ್ಲಿ ನಟಿಸಿದರು. ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾದಲ್ಲಿ ಯಶ್ ಸಹೋದರಿಯಾಗಿಯೂ ಗಮನ ಸೆಳೆದಿದ್ದಾರೆ. ಸದ್ಯ 'ಸರ್ವಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಪ್ರಸಾರವಾಗುತ್ತಿದೆ.