ETV Bharat / sitara

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಹೀರೋಗಳಾದ ನಟರು ಇವರು - ಪರಿಚಯ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಮೇಶ್

ಕಿರುತೆರೆಯಿಂದ ಬೆಳ್ಳಿತೆರೆಗೆ ಹೋದ ಅನೇಕ ನಟರು ಇಂದು ಸಾಕಷ್ಟು ಹೆಸರು ಮಾಡಿದ್ದಾರೆ. ಇಂದು ಸೂಪರ್​ ಸ್ಟಾರ್​​ಗಳಾಗಿ ಮಿಂಚುತ್ತಿರುವ ದರ್ಶನ್, ಸುದೀಪ್, ಯಶ್ , ಗಣೇಶ್ ಸೇರಿದಂತೆ ಬಹುತೇಕ ಸ್ಟಾರ್​​ಗಳು ಧಾರಾವಾಹಿಯಲ್ಲಿ ನಟಿಸಿದ್ದರು.

Small screen Actors shining in movies as heroes
ರಿಷಿ
author img

By

Published : Jul 18, 2020, 4:47 PM IST

ಚಂದನವನದಲ್ಲಿ ಮಿಂಚುತ್ತಿರುವ ನಟರ ಪೈಕಿ ಹೆಚ್ಚಿನವರು ಕಿರುತೆರೆಯಿಂದಲೇ ನಟನಾ ಪಯಣ ಆರಂಭಿಸಿದವರು. ರಮೇಶ್ ಅರವಿಂದ್ 'ಪರಿಚಯ' ಧಾರಾವಾಹಿಯಲ್ಲಿ, ಕಿಚ್ಚ ಸುದೀಪ್ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ, ಚಾಲೆಂಜಿಗ್ ಸ್ಟಾರ್ ದರ್ಶನ್ 'ಅಂಬಿಕಾ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

ಇವರೊಂದಿಗೆ 'ಚಂದ್ರಿಕಾ' ಧಾರಾವಾಹಿಯಲ್ಲಿ ಶ್ರೀನಗರ ಕಿಟ್ಟಿ, 'ಪಾಪಾ ಪಾಂಡು'ವಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಂಕಿಂಗ್ ಸ್ಟಾರ್ ಯಶ್ 'ನಂದಗೋಕುಲ' ಮತ್ತು 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಕರಿಯರ್ ಆರಂಭಿಸಿದರು. ಇದೀಗ ಅವರ ಹಾದಿಯಲ್ಲಿಯೇ ಒಂದಷ್ಟು ಕಿರುತೆರೆ ಕಲಾವಿದರು ಹಿರಿತೆರೆಗೆ ಕಾಲಿಟ್ಟಿದ್ದಾರೆ.

Small screen Actors shining in movies as heroes
ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ

ಲವ್ ಮಾಕ್​​ಟೇಲ್​​​​​​ ಸಿನಿಮಾ ಮೂಲಕ ಚಂದನವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ಡಾರ್ಲಿಂಗ್ ಕೃಷ್ಣ ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿದವರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಾಯಕ ಕೃಷ್ಣನಾಗಿ ನಟಿಸಿದ್ದರು. ಕೃಷ್ಣ ಮತ್ತೆ ಮುಖ ಮಾಡಿದ್ದು ಹಿರಿತೆರೆಯತ್ತ. 'ಮದರಂಗಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಕೃಷ್ಣ ನಂತರ ನಮ್ ದುನಿಯಾ ನಮ್ ಸ್ಟೈಲ್, ಜಾಲಿ ಬಾರು ಮತ್ತು ಪೋಲಿ ಗೆಳೆಯರು, ಚಾರ್ಲಿ, ಜಾನ್ ಜಾನಿ ಜನಾರ್ಧನ್, ಹುಚ್ಚ 2, ಲವ್ ಮಾಕ್​​ಟೇಲ್​​​​ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವಿಜಯ್ ಸೂರ್ಯ

ವಿಜಯ್ ಸೂರ್ಯ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ವಿಜಯ್ ಸೂರ್ಯ ಕಿರುತೆರೆ ವೀಕ್ಷಕರ ಪಾಲಿನ ಪ್ರೀತಿಯ ನಟ. 'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್ ಆಗಿ 7 ವರ್ಷಗಳಿಂದ ವೀಕ್ಷಕರ ಮನ ಸೆಳೆದ ವಿಜಯ್ ಸೂರ್ಯ ಇದೀಗ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುತ್ತಿದ್ದಾರೆ. ಕದ್ದುಮುಚ್ಚಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ವಿಜಯ್ ಸೂರ್ಯ ನಂತರ ಇಷ್ಟಕಾಮ್ಯ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಚಂದನ್ ಕುಮಾರ್

'ಲವ್ ಯೂ ಆಲಿಯಾ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಚಂದನ್, ರಾಧಾ ಕಲ್ಯಾಣ ಧಾರಾವಾಹಿಯ ವಿಶು ಆಗಿ ನಟನಾ ಪಯಣ ಶುರು ಮಾಡಿದರು. ಮುಂದೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಚಂದನ್, ಸದ್ಯ ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯ ಜೊತೆಗೆ ತೆಲುಗಿನ ಸಾವಿತ್ರಮ್ಮಯಿ ಅಬ್ಬಾಯಿ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ. ಪರಿಣಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ಚಂದನ್ ಪ್ರೇಮಬರಹ, ಬೆಂಗಳೂರು 560023, ಲವ್ ಯೂ ಆಲಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

ಆಪರೇಷನ್ ಅಲಮೇಲಮ್ಮ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಿಷಿ ಕೂಡಾ ಕಿರುತೆರೆ ಪ್ರತಿಭೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿಯಾಗಿ ನಟಿಸುತ್ತಿದ್ದ ರಿಷಿ ಇತ್ತೀಚೆಗೆ ಮನಸಾರೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಪರೇಷನ್ ಅಲಮೇಲಮ್ಮ ಸಿನಿಮಾದ ಬಳಿಕ ಕವಲುದಾರಿ, ಶ್ರೀ ಭರತ ಬಾಹುಬಲಿ, ಸಾರ್ವಜನಿಕರಿಗೆ ಸುವರ್ಣವಕಾಶ ಸಿನಿಮಾದಲ್ಲಿ ಅಭಿನಯಿಸಿರುವ ರಿಷಿ ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿ.

ಶ್ರೀ ಮಹಾದೇವ್​

ಶ್ರೀ ಮಹಾದೇವ್

ಇರುವುದೆಲ್ಲವ ಬಿಟ್ಟು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದ ಶ್ರೀಮಹಾದೇವ್ ಕೂಡಾ ಬಣ್ಣದ ಜಗತ್ತಿಗೆ ಬಂದುದ್ದು ಕಿರುತೆರೆ ಮೂಲಕ. 'ಚಿಟ್ಟೆ ಹೆಜ್ಜೆ' ಧಾರಾವಾಹಿ ಮೂಲಕ ನಟನಾ ಪಯಣ ಶುರು ಮಾಡಿದ ಶ್ರೀ ಮಹಾದೇವ್ ಶ್ರೀರಸ್ತು ಶುಭಮಸ್ತು, ನೀಲಿ, ಇಷ್ಟದೇವತೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ ಕೋಟಿಗೊಬ್ಬ 3 ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಚಂದು ಗೌಡ

ಚಂದು ಗೌಡ

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ ಚಂದನ್ ಆಗಿ ನಟಿಸಿದ ಚಂದು ಗೌಡ ಕೂಡಾ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಅಟೆಂಪ್ಟ್ ಟು ಮರ್ಡರ್, ಕೃಷ್ಣ ಗಾರ್ಮೆಂಟ್ಸ್, ಕುಷ್ಕ ಚಿತ್ರಗಳಲ್ಲಿ ನಟಿಸಿರುವ ಇವರು ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ಕೂಡಾ ಅಭಿನಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.