'ಮಗಳು ಜಾನಕಿ ' ಧಾರಾವಾಹಿಯಲ್ಲಿ ನಾಯಕ ನಿರಂಜನ್ ಅಕ್ಕ ಸಂಜನಾ ಆಗಿ ಅಭಿನಯಿಸುತ್ತಿದ್ದ ಸುಪ್ರಿಯಾ ರಾವ್ ತಮ್ಮ ಬಹುಕಾಲದ ಗೆಳೆಯ ವಿಜಯ್ ಅವರೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸುಪ್ರಿಯಾ ಅವರಂತೆ ಕಿರುತೆರೆಯ ಎಷ್ಟೋ ನಟ-ನಟಿಯರು ಲವ್ ಮ್ಯಾರೇಜ್ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ.
ಮಯೂರಿ- ಅರುಣ್
'ಅಶ್ವಿನಿ ನಕ್ಷತ್ರ ' ಖ್ಯಾತಿಯ ಮಯೂರಿ ಕ್ಯಾತರಿ ಬೆಳ್ಳಿ ತೆರೆಯಲ್ಲೂ ಹೆಸರು ಮಾಡಿದವರು. ಇತ್ತೀಚೆಗಷ್ಟೇ ತಾವು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಅರುಣ್ ಅವರೊಂದಿಗೆ ದೇವಸ್ಥಾನದಲ್ಲಿ ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಶ್ವೇತಾ ಪ್ರಸಾದ್-ಆರ್ಜೆ ಪ್ರದೀಪ್
ರೆಡಿಯೋ ಜಾಕಿಯಾಗಿ ಖ್ಯಾತಿ ಗಳಿಸಿರುವ ಪ್ರದೀಪ್ ಮತ್ತು ರಾಧಾ ರಮಣ ಧಾರಾವಾಹಿಯ ಆರಾಧನಾ ಆಗಿ ಮಿಂಚಿದ ಶ್ವೇತಾ ಪ್ರಸಾದ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕಾಲೇಜು ದಿನಗಳಲ್ಲೇ ಶ್ವೇತಾ ಅವರನ್ನು ಪ್ರೀತಿಸುತ್ತಿದ್ದ ಪ್ರದೀಪ್ ಬಹಳ ವರ್ಷಗಳ ನಂತರ ಗುರುಹಿರಿಯರನ್ನು ಒಪ್ಪಿಸಿ ಮದುವೆಯಾದರು. ಇದೀಗ ಶ್ವೇತಾ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಹೆಸರು ಮಾಡಿದ್ದಾರೆ ಎಂದರೆ ಅದಕ್ಕೆ ಕಾರಣ ಪ್ರದೀಪ್ ನೀಡಿದ ಪ್ರೋತ್ಸಾಹ.
ನೇಹಾ ಗೌಡ-ಚಂದನ್
2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ 'ಲಕ್ಷ್ಮಿ ಬಾರಮ್ಮ ' ಧಾರಾವಾಹಿಯ ಗೊಂಬೆ ಖ್ಯಾತಿಯ ನೇಹಾ ಗೌಡ ಮತ್ತು ಚಂದನ್ ಅವರದ್ದು ಕೂಡಾ ಲವ್ ಮ್ಯಾರೇಜ್. ಬಾಲ್ಯದಿಂದಲೂ ಜೊತೆಯಾಗಿ ಬೆಳೆದ ಇವರು ಮೊದಲು ಸ್ನೇಹಿತರಾಗಿದ್ದರು. ತದ ನಂತರ ಪ್ರೀತಿಯಲ್ಲಿ ಬಿದ್ದ ಇವರು ಇದೀಗ ಸತಿ ಪತಿಗಳಾಗಿದ್ದಾರೆ.
ರಕ್ಷ್-ಅನುಷಾ
'ಪುಟ್ಟಗೌರಿ ಮದುವೆ' ಮಹೇಶನಾಗಿ ಹೆಸರು ಮಾಡಿ ಇದೀಗ 'ಗಟ್ಟಿಮೇಳ ' ಧಾರಾವಾಹಿಯ ವೇದಾಂತ್ ವಸಿಷ್ಠ ಆಗಿ ನಟಿಸುತ್ತಿರುವ ರಕ್ಷ್ ಕೂಡಾ ತಮ್ಮ ಬಹುಕಾಲದ ಗೆಳತಿ ಅನುಷಾ ಜೊತೆಗೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಜಗನ್-ರಕ್ಷಿತಾ ಮುನಿಯಪ್ಪ
ಕಳೆದ ವರ್ಷ ವಿವಾಹವಾಗಿರುವ 'ಸೀತಾವಲ್ಲಭ ' ಧಾರಾವಾಹಿಯ ಆರ್ಯ ಖ್ಯಾತಿಯ ಜಗನ್, ಫ್ಯಾಷನ್ ಡಿಸೈನರ್ ರಕ್ಷಿತಾ ಮುನಿಯಪ್ಪ ಅವರನ್ನು ವರಿಸಿದ್ದರು. ಜಗನ್ ಕೂಡಾ ಬಹಳ ವರ್ಷಗಳಿಂದ ರಕ್ಷಿತಾ ಅವರನ್ನು ಪ್ರೀತಿಸುತ್ತಿದ್ದರು.
ಆಕರ್ಷ್ - ದೀಪಿಕಾ
'ಕುಲವಧು ' ಧಾರಾವಾಹಿಯ ಧನ್ಯಾ ಆಗಿ ಮನೆ ಮಾತಾಗಿರುವ ದೀಪಿಕಾ, ಅದೇ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಆಕರ್ಷ್ ಎಂಬವರನ್ನು ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ರಘು - ಅಮೃತ ರಾಮಮೂರ್ತಿ
'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ' ಧಾರಾವಾಹಿಯಲ್ಲಿ ರೀಲ್ ಜೋಡಿಗಳಾಗಿ ನಟಿಸಿದ್ದ ಈ ಜೋಡಿ ಕ್ರಮೇಣ ಲವ್ನಲ್ಲಿ ಬಿದ್ದು ಈಗ ರಿಯಲ್ ಲೈಫ್ನಲ್ಲೂ ಜೋಡಿಯಾಗಿದ್ದಾರೆ.
ಭವಾನಿ ಸಿಂಗ್-ಪಂಕಜಾ ಶಿವಣ್ಣ
'ಸುಬ್ಬಲಕ್ಷ್ಮಿ ಸಂಸಾರ ' ಧಾರಾವಾಹಿಯಲ್ಲಿ ಒಂದಾಗಿ ಅಭಿನಯಿಸಿದ್ದ ಭವಾನಿ ಸಿಂಗ್ ಹಾಗೂ ಪಂಕಜಾ ಶಿವಣ್ಣ ಇಬ್ಬರೂ ಪ್ರೀತಿಸಿದ್ದು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.