ETV Bharat / sitara

ಟಿಕ್​ಟಾಕ್​​​​​ ನಿಷೇಧದ ಬಗ್ಗೆ ಕಿರುತೆರೆ ನಟ ಪವನ್​ ಕುಮಾರ್ ಹೇಳಿದ್ದೇನು...? - Kinnari fame Pavan kumar

ಇಷ್ಟು ದಿನ ಟಿಕ್​ಟಾಕ್​​ಗೆ ಅಡಿಕ್ಟ್​ ಆಗಿದ್ದ ಯುವಜನತೆ ಇನ್ನು ಮುಂದೆ ತಮ್ಮ ಸಮಯವನ್ನು ಒಳ್ಳೆ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು. ಪ್ರಧಾನಿ ಮೋದಿ ಈ ಚೀನಾ ಆ್ಯಪ್​​ಗಳನ್ನು ಬ್ಯಾನ್ ಮಾಡಿ ಒಳ್ಳೆ ಕೆಲಸ ಮಾಡಿದರು ಎಂದು ಕಿರುತೆರೆ ನಟ ಪವನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Small screen actor reaction about Ticktock ban
ಪವನ್​ ಕುಮಾರ್
author img

By

Published : Jul 1, 2020, 12:23 PM IST

Updated : Jul 1, 2020, 12:59 PM IST

ಟಿಕ್​ಟಾಕ್​, ಯುಸಿ ಬ್ರೌಸರ್, ಷೇರ್ ಇಟ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಸುಮಾರು 59 ಚೀನಾ ಮೊಬೈಲ್ ಆ್ಯಪ್​​ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದು ತಿಳಿದ ವಿಚಾರ. ಅದರಲ್ಲಿ ಟಿಕ್​ಟಾಕ್ ಬ್ಯಾನ್ ಮಾಡಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿರುವುದು ಬಿಟ್ಟರೆ ಬಹುತೇಕ ಎಲ್ಲರೂ ಆ್ಯಪ್​​​ಗಳು ಬ್ಯಾನ್ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Small screen actor reaction about Ticktock ban
ಪವನ್​ ಕುಮಾರ್

ಕಿರುತೆರೆ ನಟ ಪವನ್ ಕುಮಾರ್ ಕೂಡಾ ಆ್ಯಪ್ ಬ್ಯಾನ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ಶಿವಂ ಪಾತ್ರದಲ್ಲಿ ನಟಿಸಿದ್ದ ಪವನ್ ಕುಮಾರ್ 'ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಟಿಕ್​​ಟಾಕ್​​​ ಬ್ಯಾನ್ ಆಗಿದೆ ಎಂಬ ವಿಚಾರ ಕೇಳಿ ಬಹಳ ಸಂತೋಷವಾಯ್ತು. ಇನ್ನು ಮುಂದಾದರೂ ಯುವಜನತೆ ಟಿಕ್​​ಟಾಕ್​​​ಗೆ ಅಡಿಕ್ಟ್​ ಆಗುವುದು ಬಿಟ್ಟು ತಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದು' ಎಂದಿದ್ದಾರೆ.

ಟಿಕ್​​ಟಾಕ್​ ಬ್ಯಾನ್ ಬಗ್ಗೆ ನಟ ಪವನ್ ಪ್ರತಿಕ್ರಿಯೆ

'ಅಷ್ಟೇ ಅಲ್ಲ, ಟಿಕ್​​​​ಟಾಕ್​​​ಗೆ ಅಡಿಕ್ಟ್​ ಆಗಿದ್ದವರಲ್ಲಿ ಯುವಜನತೆಯೇ ಹೆಚ್ಚು. 10 ವರ್ಷದ ಮಕ್ಕಳು ಕೂಡಾ ಟಿಕ್​ಟಾಕ್​​​​​​​​ ಮಾಡುತ್ತಿದ್ದರು. ಯಾವುದೇ ತಂತ್ರಜ್ಞಾನ ಆಗಿರಲಿ, ಅದರಿಂದ ನಮಗೆ ಉಪಯೋಗವಾಗಬೇಕೇ ಹೊರತು, ನಾವು ಕೆಡುವಂತೆ ಆಗಬಾರದು. ಇಂತಹ ಆ್ಯಪ್​​​ಗಳಿಂದ ಎಲ್ಲರ ಸಮಯ ಹಾಳಾಗುತ್ತಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಈ ಆ್ಯಪ್ ಬ್ಯಾನ್ ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ. ಇಷ್ಟು ದಿನ ಟಿಕ್​​ಟಾಕ್​​ಗಳಲ್ಲಿ ಮುಳುಗಿದ್ದವರು ಈಗ ಬೇರೆ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು' ಎಂದು ಪವನ್​​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಕಿನ್ನರಿ' ಖ್ಯಾತಿಯ ಪವನ್​ ಕುಮಾರ್

Last Updated : Jul 1, 2020, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.