'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ಅಭಿನಯಿಸುತ್ತಿರುವ ರಕ್ಷ್ ಮನೋಜ್ಞ ಅಭಿನಯದ ಮೂಲಕ ನಟನಾ ಕ್ಷೇತ್ರದಲ್ಲಿ ಮನೆ ಮಾತಾದವರು. ರಕ್ಷ್ ಈಗ ಪ್ರಕೃತಿಯ ರಕ್ಷಣೆಗೆ ಪಣತೊಟ್ಟಿದ್ದಾರೆ.
ಪರಿಸರ ಉಳಿಸುವ ಸಲುವಾಗಿ ಗಿಡ ನೆಡುವ ಕಾರ್ಯಕ್ಕೆ ರಕ್ಷ್ ಮುಂದಾಗಿದ್ದಾರೆ. ತಾವು ಗಿಡ ನೆಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ "ಗಿಡ ನೆಡಿ, ಇದು ಮುಕ್ತ ಹಾಗೂ ಕರುಣಾಳು" ಎಂಬ ಸಂದೇಶವನ್ನು ಕೂಡಾ ಜನರಿಗೆ ಸಾರಿದ್ದಾರೆ ರಕ್ಷ್. ಸದ್ಯಕ್ಕೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ರಕ್ಷ್ ಇತ್ತೀಚೆಗಷ್ಟೇ ಶೂಟಿಂಗ್ನಿಂದ ಬಿಡುವು ಪಡೆದು ಕಬಿನಿ ಡ್ಯಾಂ ಬಳಿ ಇರುವ ಆದಿವಾಸಿಗಳೊಂದಿಗೆ ಕಾಲ ಕಳೆದಿದ್ದರು. ತಮ್ಮ ಒತ್ತಡದ ಬದುಕಿನ ನಡುವೆ ಪ್ರಕೃತಿಯ ಮಧ್ಯೆ ಕಾಲ ಕಳೆದ ಸಂತಸದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ರಕ್ಷ್ ಶೇರ್ ಮಾಡಿದ್ದರು.