ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಶ್ವೇತಾ ಚಿಕ್ಕಿಯಾಗಿ ಗಮನ ಸೆಳೆದ ನವ್ಯಾ ಗೌಡ ತಮ್ಮ ಮಗನ ಫೋಟೋ ರಿವೀಲ್ ಮಾಡಿದ್ದಾರೆ. ಸೀಮಂತ ಕಾರ್ಯಕ್ರಮದ ಮೂಲಕ ಸುದ್ದಿಯಾಗಿದ್ದ ನವ್ಯಾ ಗೌಡ ಕಳೆದ ವರ್ಷ ಅಕ್ಟೋಬರ್ನಲ್ಲಿ ಮುದ್ದು ಕೃಷ್ಣನನ್ನು ಬರಮಾಡಿಕೊಂಡಿದ್ದರು.
ಇದೀಗ ಮೊದಲ ಬಾರಿಗೆ ತಮ್ಮ ಮುದ್ದು ಮಗನ ಫೋಟೋವನ್ನು ರಿವೀಲ್ ಮಾಡಿದ್ದು ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಕಿರುತೆರೆ ವೀಕ್ಷಕರ ಪಾಲಿನ ಶ್ವೇತಾ ಚಿಕ್ಕಿ ಎಂದೇ ಜನಪ್ರಿಯರಾಗಿದ್ದ ನವ್ಯಾ. ಅವರ ನಿಜ ಹೆಸರೇ ಹಲವರಿಗೆ ತಿಳಿದಿಲ್ಲ, ಏಕೆಂದರೆ ಜನ ಅವರನ್ನು ಇಂದಿಗೂ ಶ್ವೇತಾ ಎಂಬ ಹೆಸರಿನಲ್ಲೇ ಗುರುತಿಸುತ್ತಾರೆ. 'ಅಮ್ಮ ನಿನಗಾಗಿ' ಧಾರಾವಾಹಿ ಮೂಲಕ ಬಣ್ಣದ ಪಯಣ ಶುರು ಮಾಡಿದ್ದ ನವ್ಯಾ ನೆಗೆಟಿವ್ ಪಾತ್ರಕ್ಕೆ ಕೂಡಾ ಫೇಮಸ್. 'ಈ ಬಂಧನ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ ನವ್ಯಾ, ಹಾರರ್ ಧಾರಾವಾಹಿ 'ಆತ್ಮಬಂಧನ'ದಲ್ಲೂ ಸೈಕಿಯಾಟ್ರಿಸ್ಟ್ ವೇದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ಶ್ವೇತಾ ಗರ್ಭಿಣಿಯಾಗಿದ್ದರಿಂದ ನಟನೆಗೆ ಬೈ ಹೇಳಿದರು. ಇದೀಗ ಮುದ್ದು ಕಂದನ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿರುವ ನವ್ಯಾ ತಾಯ್ತನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.