ಶೈನ್ ಶೆಟ್ಟಿ ಬಿಗ್ ಬಾಸ್ ಮುಗಿದ ಮೇಲೆ ತುಂಬಾ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಆ್ಯಕ್ಟೀವ್ ಆಗಿರುವ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
![shine shetty and megha in mysore holi festival](https://etvbharatimages.akamaized.net/etvbharat/prod-images/6381043_thumb2.png)
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಹೋಳಿ ಕಾರ್ಯಕ್ರಮ ರಂಗ್ ದೇ ಮೈಸೂರಿನಲ್ಲಿ ಭಾಗಿಯಾಗಿದ್ರು. ಇನ್ನೊಂದು ವಿಶೇಷ ಅಂದ್ರೆ ಇದೇ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ(ಅನು ಸಿರಿಮನೆ) ಕೂಡ ಭಾಗಿಯಾಗಿದ್ರು.
ತಾವು ಒಟ್ಟಾಗಿ ಹೋಳಿ ಆಚರಿಸಿರುವ ಫೋಟೋ ಮತ್ತು ವಿಡಿಯೋಗಳನ್ನು ಶೈನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಫೋಟೋ ಕೆಳಗೆ ಬರೆದಿರುವ ಶೈನ್, ಬಣ್ಣಗಳ ಹಬ್ಬ ಹೋಳಿಯನ್ನು ಮೈಸೂರಿನ ಜನ ಮತ್ತು ಜೊತೆ ಜೊತೆಯಲಿ ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ಜೊತೆ ಆಚರಿಸಿದ್ದೇನೆ ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಈ ಹಿಂದೆ ಮಂಗಳೂರಿನ ಹೋಳಿಯಲ್ಲಿಯೂ ಭಾಗಿಯಾಗಿದ್ದ ಶೈನ್ಗೆ ಬಿಗ್ ಬಾಸ್ ಖ್ಯಾತಿ ಚಂದನಾ ಮತ್ತು ದೀಪಿಕಾ ದಾಸ್ ಕೂಡ ಸಾಥ್ ನೀಡಿದ್ರು.