ಬಿಗ್ ಬಾಸ್ ಒಳಗಿದ್ದ ಶೇಷಪ್ಪ ಹಾಗೂ ನಾಗಪ್ಪ ಬಹಳ ದಿನಗಳ ನಂತರ ಮತ್ತೆ ಒಂದಾಗಿದ್ದು ಮತ್ತೆ ಕಾಮಿಡಿ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಗಳಾಗಿದ್ದ ನಟ ಹರೀಶ್ ರಾಜ್ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬಿಗ್ ಮನೆಯಿಂದ ಹೊರಬಂದ ನಂತರ ಮತ್ತೆ ಒಂದಾಗಿದ್ದಾರೆ.
- View this post on Instagram
Sheshappa and Nagappa together after a long time !! #vasukivaibhav #bigbosskannada
">
ಇತ್ತೀಚೆಗಷ್ಟೇ ಬಿಗ್ಬಾಸ್ 7 ಸ್ಪರ್ಧಿ, ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಗ್ ಬಾಸ್ ಸ್ನೇಹಿತರಿಗಾಗಿ ಖಾಸಗಿ ಹೊಟೇಲ್ ಒಂದರಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಿಗ್ ಬಾಸ್ 7 ರ ಮಾಜಿ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಹರೀಶ್ ರಾಜ್ ಹಾಗೂ ವಾಸುಕಿ ವೈಭವ್ ಇಬ್ಬರೂ ಕಾಮಿಡಿಯಾಗಿ ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಬಹಳ ದಿನಗಳ ನಂತರ ಒಂದಾದ ಶೇಷಪ್ಪ ಹಾಗೂ ನಾಗಪ್ಪ' ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡಾ ನೀಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಶೇಷಪ್ಪ, ನಾಗಪ್ಪ, ಕಳ್ಳ-ಪೊಲೀಸ್ ಪಾತ್ರಗಳನ್ನು ಮಾಡುತ್ತಾ ವೀಕ್ಷಕರನ್ನು ರಂಜಿಸಿದ್ದರು. ಇದೀಗ ಅದೇ ರೀತಿಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಕಷ್ಟು ಜನರು ಮೆಚ್ಚಿ ಕಮೆಂಟ್ ಕೂಡಾ ಮಾಡಿದ್ದಾರೆ.
- View this post on Instagram
High on humor......At @deepika__das's birthday , this is what happened!!
">