ಬಿಗ್‌ಬಾಸ್ ಸೀಸನ್ 8ರ ಕೊನೆಯ ವಾರದ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ನಲ್ಲಿ 113 ದಿನಗಳ ಜರ್ನಿಯನ್ನು ಶಮಂತ್ ಅಂತ್ಯಗೊಳಿಸಿದ್ದಾರೆ. ಈ ಸೀಸನ್ನ ಮೊದಲ ಎರಡು ವಾರಗಳ ಕಾಲ ಕ್ಯಾಪ್ಟನ್ ಆಗಿದ್ದ ಅವರು ಮುಂದಿನ ಯಾವುದೇ ವಾರಗಳಲ್ಲೂ ಕ್ಯಾಪ್ಟನ್ ಆಗಲೇ ಇಲ್ಲ.
ಮೊದಲ ಇನ್ನಿಂಗ್ಸ್ನ 42 ನೇ ದಿನಕ್ಕೆ ಮನೆಯಿಂದ ಹೊರ ಹೋಗಬೇಕಿದ್ದ ಶಮಂತ್, ನಟಿ ವೈಜಯಂತಿ ಅವರು ತಾವಾಗಿಯೇ ಮನೆಯಿಂದ ಹೊರಹೋಗಲು ನಿರ್ಧರಿಸಿದ್ದರಿಂದ ಈ ಮನೆಯಲ್ಲಿ ಕೊನೆಯ ವಾರದ ತನಕ ತಮ್ಮ ವೈಯಕ್ತಿಕ ಪ್ರತಿಭೆ ಪ್ರದರ್ಶಿಸಿದ್ದಾರೆ.
ನನ್ನ ಮೇಲೆ ನನಗೆ ಬೇಜಾರಿದೆ. ಹಾಗೆಯೇ ಖುಷಿಯೂ ಇದೆ. ಇವತ್ತು ಹೊರಗೆ ಬರುವುದಕ್ಕೆ ಮೊದಲ ಇನ್ನಿಂಗ್ಸ್ ಸ್ವಲ್ಪ ಎಫೆಕ್ಟ್ ಆಗಿದೆ. ಮಂಜು ಪಾವಗಡ ಜೊತೆಗೆ ನನಗೆ ಕನೆಕ್ಟ್ ಆಗಲೇ ಇಲ್ಲ. ಪ್ರಶಾಂತ್ ಅವರನ್ನು ನಾನು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ. ಬಿಗ್‌ಬಾಸ್ ಜರ್ನಿ ನನ್ನ ಜೀವನದಲ್ಲಿ ಹಾಗೆಯೇ ಇದೆ. ಮುಂದೆ ಮಾಡಬೇಕಾದ ಕೆಲಸ ತುಂಬಾ ಇದೆ. ಯಾವುದನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ತಕ್ಷಣ ಮಾಡಬೇಕಾದ್ದನ್ನು ಮಾಡುತ್ತೇನೆ ಎಂದರು ಶಮಂತ್.
ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಳ್ಳೊಳ್ಳೆಯ ಹಾಡುಗಳನ್ನು ಬರೆದು ಬಹಳ ಮೆಚ್ಚುಗೆ ಪಡೆದುಕೊಂಡಿದ್ದೀರಾ ಅದನ್ನು ಮುಂದುವರೆಸಿ. ಹಾಗೆಯೇ, ಸಿಕ್ಕ ಅವಕಾಶವನ್ನು ಉದಾಸೀನ ಮಾಡದೆ ಸರಿಯಾಗಿ ಬಳಸಿ ಎಂದು ಸುದೀಪ್, ಶಮಂತ್ ಅವರಿಗೆ ಸಲಹೆ ನೀಡಿದರು.