ಈಗಾಗಲೇ ಝಿ ವಾಹಿನಿಯ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮ ಫೇಮಸ್ ಆಗಿದೆ. ಯಶಸ್ವಿಯಾಗಿ ಮೂರು ಸೀಸನ್ಗಳನ್ನು ಮುಗಿಸಿರುವ ಈ ಶೋ, ನಾಲ್ಕನೇ ಸೀಸನ್ ಕೂಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಎಂದಿನಂತೆ ಹಲವು ಸಾಧಕರನ್ನು ಕರೆತಂದು ವೀಕ್ಷಕರ ಎದುರು ನಿಲ್ಲಿಸುತ್ತಿದೆ.
ಸ್ಫೂರ್ತಿಯ ಚಿಲುಮೆಯಂತಿರುವ 'ವೀಕೆಂಡ್ ವಿಥ್ ರಮೇಶ್' ಶೋ ಇದೀಗ ಮತ್ತೊಂದು ರೂಪ ಪಡೆದುಕೊಂಡಿದೆ. ವೀಕೆಂಡ್ ವಿಥ್ ರಮೇಶ್ ಜತೆಗೆ 'ಶೇಕ್ ಹ್ಯಾಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವೀಕೆಂಡ್ ಟೆಂಟ್ಲ್ಲಿ ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿದವರ ಸಾಧನೆಯ ಪುಟ ತೆರೆದಿಡುತ್ತಿದ್ದ ಈ ತಂಡ, ಇದೀಗ ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ನಾಡಿನ ಜನತೆಗೆ ಪರಿಚಯಿಸುತ್ತಿದೆ.
ಆನೇಕಲ್ನ ಸೃಜನಾ 'ಶೇಕ್ ಹ್ಯಾಂಡ್ ವಿಥ್ ರಮೇಶ್' ಮೊದಲ ಎಪಿಸೋಡಿನ ಚೊಚ್ಚಲ ಸಾಧಕಿ. ಈಕೆ SSLC ಪರೀಕ್ಷೆಯಲ್ಲಿ 625/625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಪ್ರತಿಭೆಯನ್ನು ಭೇಟಿ ಮಾಡಿದ ನಿರೂಪಕ ರಮೇಶ್ ಅರವಿಂದ್ ಆಕೆಯನ್ನ ಮಾತಾಡಿಸಿದರು. ತಂದೆ-ತಾಯಿಗಳೊಂದಿಗೆ ಆಗಮಿಸಿದ್ದ ಸೃಜನಾ, ವಿದ್ಯಾರ್ಥಿಗಳಿಗೆ ಯಾವ ರೀತಿ ಓದಬೇಕು, ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕೆಂದು ಕೆಲವೊಂದಿಷ್ಟು ಸಲಹೆ ನೀಡಿದ್ರು.
- " class="align-text-top noRightClick twitterSection" data="">
SSLCಯಲ್ಲಿ ಸಾಧನೆ ಮೆರೆದ ಕುಮುಟಾದ ಮತ್ತೋರ್ವ ವಿದ್ಯಾರ್ಥಿನಿಗೂ ಆಹ್ವಾನಿಸಲಾಗಿತ್ತು. ಬೇರೆ ಕಾರ್ಯಕ್ರಮದ ನಿಮಿತ್ತ ಅವರು ಬರಲು ಸಾಧ್ಯವಾಗಲಿಲ್ಲ. ಕೇವಲ ಸೃಜನಾಳನ್ನು ಮಾತಾಡಿಸಿದ ವೀಕೆಂಡ್ ಟೀಮ್, ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಿತು. ಈ ವಿಶೇಷ ಸಂದರ್ಶನದ ವಿಡಿಯೋವನ್ನು ಝಿ ವಾಹಿನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಶೇಕ್ ಹ್ಯಾಂಡ್ ವಿಥ್ ರಮೇಶ್ ಕಾರ್ಯಕ್ರದಲ್ಲಿ ಪ್ರತಿ ಭಾನುವಾರ ಕಿರಿಯ ಸಾಧಕರ ಪರಿಚಯವಾಗಲಿದೆ.