ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ನಟಿಸಿ ಹುಡುಗರ ಹೃದಯ ಕದ್ದಿರುವ ಚೆಲುವೆ ಪಲ್ಲವಿ ಗೌಡ. ಪಲ್ಲವಿ ಗೌಡ ಇತ್ತೀಚೆಗೆ ಮತ್ತೊಂದು ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಾಂಪ್ರದಾಯಿಕ, ಮಾಡ್ರನ್ ಎರಡೂ ಲುಕ್ನಲ್ಲೂ ಪಲ್ಲವಿ ಪೋಟೋಶೂಟ್ ಮಾಡಿಸಿದ್ದಾರೆ. 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಪಲ್ಲವಿ ಗೌಡ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದು 'ಗಾಳಿಪಟ' ಧಾರಾವಾಹಿಯಲ್ಲಿ. 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ಬ್ಯೂಟಿಫುಲ್ ವಿಲನ್ ನಂದಿತಾ ಆಗಿ ನಟಿಸಿದ ಪಲ್ಲವಿ ಸೀರಿಯಲ್ ಪ್ರಿಯರಿಗೆ ಮತ್ತಷ್ಟು ಹತ್ತಿರವಾದರು. ಸದ್ಯ ಸೇವಂತಿ ಆಗಿ ನಟಿಸುತ್ತಿರುವ ಈಕೆ ಚಂದ್ರಚಕೋರಿ, ಪರಿಣಯ ಧಾರಾವಾಹಿಗಳಲ್ಲಿ ಕೂಡಾ ಬಣ್ಣ ಹಚ್ಚಿದ್ದಾರೆ. ಪಲ್ಲವಿಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟವಂತೆ. ಶಾಲಾ ದಿನಗಳಲ್ಲಿ ಯಾವುದೇ ಡ್ಯಾನ್ಸ್ ಕಾರ್ಯಕ್ರಮವಿದ್ದರೂ ಅಲ್ಲಿ ಪಲ್ಲವಿ ಗೌಡ ಹಾಜರಾಗುತ್ತಿದ್ದರು. ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಹತ್ತು ಡ್ಯಾನ್ಸ್ ಗಳಿದ್ದರೆ ಆ ಹತ್ತೂ ಡ್ಯಾನ್ಸ್ಗಳ ಪಟ್ಟಿಯಲ್ಲಿ ಈಕೆಯ ಹೆಸರು ಖಾಯಂ ಇರುತ್ತಿತ್ತು ಎಂದು ಪಲ್ಲವಿ ಹೇಳಿಕೊಂಡಿದ್ದಾರೆ.

ಪಾಸಿಟಿವ್ ಪಾತ್ರಗಳಲ್ಲಿ ಅಭಿನಯಕ್ಕೆ ಅವಕಾಶ ತುಂಬಾ ಕಡಿಮೆ. ಅಳು, ನಗು, ಸಂತಸ ಇವಿಷ್ಟರಲ್ಲೇ ಪಾತ್ರ ಮುಗಿದು ಹೋಗುತ್ತದೆ. ನೆಗೆಟಿವ್ ಪಾತ್ರ ಹಾಗಲ್ಲ. ಅದರಲ್ಲಿ ನಟನೆಗೆ ಅವಕಾಶ ಹೆಚ್ಚು ಎಂದು ಹೇಳುವ ಪಲ್ಲವಿ ಗೌಡ ಅವರಿಗೆ ಕಾಮಿಡಿ ಪಾತ್ರಕ್ಕೆ ಜೀವ ತುಂಬುವ ಬಯಕೆಯಂತೆ. ಅದಕ್ಕೆ ಕಾರಣ ಕೂಡಾ ಇದೆ. ಪಲ್ಲವಿ ಅವರ ಪ್ರಕಾರ ನಗುವುದು ತುಂಬಾ ಸುಲಭ, ಆದರೆ ನಗಿಸುವುದು ಅಷ್ಟೇ ಕಷ್ಟ. ಜನರನ್ನು ನಗಿಸುವುದನ್ನು ನಾನು ಕಲಿಯಬೇಕು ಎನ್ನುತ್ತಾರೆ ಪಲ್ಲವಿ. 'ಪ್ರೇಮ ಗೀಮ ಜಾನೆ ದೋ 'ಸಿನಿಮಾದಲ್ಲಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ 'ಕೊಡೆ ಮುರುಗ' ಚಿತ್ರದಲ್ಲಿಯೂ ಕೂಡಾ ಪಲ್ಲವಿ ಬಣ್ಣ ಹಚ್ಚಿದ್ದಾರೆ.