ಕಿರುತೆರೆ ವೀಕ್ಷಕರಿಗೆ ಸುಗ್ಗಿಯೋ ಸುಗ್ಗಿ, ಏಕೆ ಅಂತೀರಾ..? ಇದುವರೆಗೂ ಸೋಮವಾರದಿಂದ ಶುಕ್ರವಾರದವರೆಗೆ ಅಂದರೆ ವಾರದ 5 ದಿನಗಳು ಮಾತ್ರ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆದರೆ ಇದೀಗ ವಾರದ ಆರೂ ದಿನಗಳು ಧಾರಾವಾಹಿಗಳು ಪ್ರಸಾರವಾಗಲಿವೆ.
ಇತ್ತೀಚೆಗಷ್ಟೇ ಜೀ ವಾಹಿನಿ ವಾರದ 6 ದಿನಗಳು ಧಾರಾವಾಹಿಯನ್ನು ಪ್ರಸಾರ ಮಾಡುವುದಾಗಿ ತಿಳಿಸಿತ್ತು. ಅದರಂತೆ ವೀಕ್ಷಕರು ಇದೀಗ ವಾರದ ಆರೂ ದಿನಗಳು ತಮ್ಮ ಮೆಚ್ಚಿನ ಧಾರಾವಾಹಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ಸಾಲಿಗೆ ಕಲರ್ಸ್ ಕನ್ನಡ ಕೂಡಾ ಸೇರಿದೆ. ಕಲರ್ಸ್ ಕನ್ನಡ ಕೂಡಾ ಇನ್ಮುಂದೆ ವಾರದಲ್ಲಿ 6 ದಿನಗಳ ಧಾರಾವಾಹಿ ಪ್ರಸಾರ ಮಾಡುವುದಾಗಿ ತಿಳಿಸಿದೆ.
ಮಿಥುನ ರಾಶಿ, ನಮ್ಮನೆ ಯುವರಾಣಿ, ಮಂಗಳ ಗೌರಿ ಮದುವೆ, ಕನ್ನಡತಿ, ಗೀತಾ, ಸೀತಾವಲ್ಲಭ, ಮೂರು ಗಂಟು ಧಾರಾವಾಹಿಗಳು ಇನ್ನು ಮುಂದೆ ವಾರದ ಆರು ದಿನಗಳು ಪ್ರಸಾರವಾಗಲಿದೆ. ಈ ಮೂಲಕ ವೀಕ್ಷಕರಿಗೆ ವಾರದ ಆರು ದಿನವೂ ಮನರಂಜನೆಯ ಮಹಾಪೂರವೇ ದೊರೆಯಲಿದೆ.
ಅಷ್ಟೇ ಅಲ್ಲ, ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ದೇವಕಿ ನಂದನ, ಅಶೋಕ ಚಕ್ರವರ್ತಿ ಮತ್ತು ನಾಗಕನ್ನಿಕೆ ಡಬ್ಬಿಂಗ್ ಧಾರಾವಾಹಿಗಳು ಕೂಡಾ 6 ದಿನಗಳು ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ಕ್ಕೆ ದೇವಕಿ ನಂದನ 5.30 ಕ್ಕೆ ಅಶೋಕ ಚಕ್ರವರ್ತಿ ಮತ್ತು ರಾತ್ರಿ 10 ಗಂಟೆಗೆ ನಾಗಕನ್ನಿಕೆ ಪ್ರಸಾರವಾಗಲಿದೆ.