ನಿರೂಪಣೆ, ಕಿರುತೆರೆ ಮೂಲಕ ವೃತ್ತಿ ಬದುಕು ಆರಂಭಿಸಿದ ಎಷ್ಟೋ ನಟ-ನಟಿಯರು ಇದೀಗ ಬೆಳ್ಳಿತೆರೆಯಲ್ಲಿ ಕೂಡಾ ಮಿಂಚುತ್ತಿದ್ದಾರೆ. ಧಾರಾವಾಹಿ ಮೂಲಕ ಜನರಿಗೆ ಪರಿಚಯವಾದ ಬಹಳಷ್ಟು ನಟಿಯರು ಈಗ ಖ್ಯಾತ ಸಿನಿಮಾ ನಾಯಕಿಯರಾಗಿ ಹೆಸರು ಮಾಡಿದ್ದಾರೆ.
ಮಯೂರಿ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_687.jpg)
'ಅಶ್ವಿನಿ ನಕ್ಷತ್ರ'ದ ಅಶ್ವಿನಿಯಾಗಿ ಕಿರುತೆರೆಗೆ ಬಂದ ಹುಬ್ಬಳ್ಳಿ ಚೆಲುವೆ ಮಯೂರಿ ಕ್ಯಾತರಿ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಟಿಸಿದ್ದೇ ತಡ ಆಕೆಗೆ ಬೆಳ್ಳಿತೆರೆಯಲ್ಲಿ ಕೂಡಾ ಅವಕಾಶ ಹುಡುಕಿ ಬಂತು. ಕೃಷ್ಣಲೀಲಾ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಮಯೂರಿ ನಂತರ ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, ರ್‍ಯಾಂಬೋ 2, ಜಾನಿ ಜಾನಿ ಎಸ್ ಪಪ್ಪಾ, 8 ಎಂಎಂ, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಮೌನಂ, ಪೊಗರು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ ಆದ್ಯಂತ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.
ಅದಿತಿ ಪ್ರಭುದೇವ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_492.jpg)
'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯ ಕಮಲಿಯಾಗಿ ನಟನಾ ರಂಗಕ್ಕೆ ಬಂದ ಅದಿತಿ ಪ್ರಭುದೇವ ನಂತರ ನಾಗಕನ್ನಿಕೆಯಾಗಿ ಬದಲಾದರು. 'ನಾಗಕನ್ನಿಕೆ' ಧಾರಾವಾಹಿಯ ಶಿವಾನಿ ಆಗಿ ವೀಕ್ಷಕರಿಗೆ ಮನರಂಜನೆ ನೀಡಿದ ಅದಿತಿ ಪ್ರಭುದೇವ ಸದ್ಯ ಹಿರಿತೆರೆಯ ಬೇಡಿಕೆಯ ನಟಿ. 'ಧೈರ್ಯಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ಅದಿತಿ ಮುಂದೆ ಬಜಾರ್, ಆಪರೇಶನ್ ನಕ್ಷತ್ರ, ಸಿಂಗ, ರಂಗನಾಯಕಿ, ಬ್ರಹ್ಮಚಾರಿ, ತೋತಾಪುರಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕವಿತಾ ಗೌಡ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_200.jpg)
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಲಚ್ಚಿ ಆಗಿ ಬಣ್ಣದ ಲೋಕಕ್ಕೆ ಬಂದ ಕವಿತಾ ಗೌಡ, ವಿದ್ಯಾ ವಿನಾಯಕ ಧಾರಾವಾಹಿಯ ವಿದ್ಯಾ ಆಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದರು. ನಂತರ ಶ್ರೀನಿವಾಸ ಕಲ್ಯಾಣ ಧಾರಾವಾಹಿ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರಬಲ್, ಹುಟ್ಟುಹಬ್ಬದ ಶುಭಾಶಯಗಳು, ಗೋವಿಂದ ಗೋವಿಂದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರಂಜನಿ ರಾಘವನ್
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_941.jpg)
ಪುಟ್ಟಗೌರಿ ಮದುವೆಯ ಗೌರಿಯಾಗಿ ಕಿರುತೆರೆ ಪ್ರಿಯರ ಮನ ಕದ್ದ ರಂಜನಿ ರಾಘವನ್, ಆಕಾಶ ದೀಪ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟವರು. ಪುಟ್ಟಗೌರಿ ಧಾರಾವಾಹಿ ನಂತರ ಸಣ್ಣ ಬ್ರೇಕ್ ಪಡೆದ ರಂಜನಿ ನಂತರ ಕಿರುತೆರೆಗೆ ಮರಳಿದ್ದು ನಿರ್ದೇಶಕಿಯಾಗಿ, ಸಂಭಾಷಣೆಗಾರ್ತಿಯಾಗಿ. ಇಷ್ಟ ದೇವತೆ ಧಾರಾವಾಹಿಯ ನಿರ್ದೇಶಕಿಯಾಗಿ ಸೈ ಎನಿಸಿಕೊಂಡ ರಂಜನಿ ಇದೀಗ ಕನ್ನಡತಿಯ ಭುವಿ ಆಲಿಯಾಸ್ ಭುವನೇಶ್ವರಿ ಯಾಗಿಯೂ ಮನೆ ಮಾತಾಗಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಂಜನಿ ಹಿರಿತೆರೆಯಲ್ಲೂ ಮಿಂಚುತ್ತಿದ್ದಾರೆ. 'ರಾಜಹಂಸ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಂಜನಿ ಟಕ್ಕರ್, ಸತ್ಯಂ ಸಿನಿಮಾಗಳಲ್ಲಿ ನಟಿಸಿದರು. ಇದರೊಂದಿಗೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.
ಸಮೀಕ್ಷಾ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_1070.jpg)
'ಮೀನಾಕ್ಷಿ ಮದುವೆ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಮಲೆನಾಡ ಬೆಡಗಿ ಸಮೀಕ್ಷಾಗೆ ಹೆಸರು ತಂದು ಕೊಟ್ಟಿದ್ದು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಶನಾಯ ಪಾತ್ರ. ಇದೀಗ ಮೂರು ಗಂಟು ಧಾರಾವಾಹಿಯಲ್ಲಿ ನಟಿಸುತ್ತಿರುವ ಸಮೀಕ್ಷಾ 'ದಿ ಟೆರರಿಸ್ಟ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದವರು . ಮುಂದೆ 96, ಫ್ಯಾನ್ ಸಿನಿಮಾದಲ್ಲಿ ನಟಿಸಿದ ಈಕೆ ನೀರೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಚೈತ್ರಾ ರಾವ್
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_260.jpg)
ರಾಗ ಅನುರಾಗ ಧಾರಾವಾಹಿ ಮೂಲಕ ನಟನಾ ರಂಗಕ್ಕೆ ಬಂದ ಚೈತ್ರಾ ರಾವ್ 'ಜೋಡಿ ಹಕ್ಕಿ' ಧಾರಾವಾಹಿಯ ಜಾನಕಿ ಟೀಚರ್ ಆಗಿ ಮನೆ ಮಾತಾಗಿದ್ದರು. ಮುಂದೆ 'ಚಕ್ರವ್ಯೂಹ' ಸಿನಿಮಾದಲ್ಲಿ ನಟಿಸಿದ ಈಕೆ 'ಮಾಯಾಬಜಾರ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಅರಬ್ಬಿ' ಎನ್ನುವ ಬಯೋಪಿಕ್ನಲ್ಲಿ ಬಣ್ಣ ಹಚ್ಚಿರುವ ಈಕೆ 'ಟಾಮ್ ಆ್ಯಂಡ್ ಜೆರ್ರಿ' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.
ಅನುಪಮಾ ಗೌಡ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_206.jpg)
ಅಕ್ಕ ತಂಗಿ, ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲಿ ನಟಿಸಿರುವ ಅನುಪಮಾ ಜನಪ್ರಿಯತೆ ಪಡೆದಿದ್ದು'ಅಕ್ಕ' ಧಾರಾವಾಹಿ ಮೂಲಕ. 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ಅನುಪಮಾ 'ನಗಾರಿ' ಸಿನಿಮಾದ ಮೂಲಕ ಹಿರಿತೆರೆಗೆ ಬಂದರು. ಈ ಸಿನಿಮಾ ನಂತರ ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿಯಲ್ಲಿ ನಟಿಸಿದ ಈಕೆ ತ್ರಯಂಬಕಂ, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ನಟಿಸಿದ್ದಾರೆ.
ದಿವ್ಯ ಉರುಡುಗ
![serial actress who get fame in films also](https://etvbharatimages.akamaized.net/etvbharat/prod-images/kn-bng-02-smallscreen-sandalwood-photo-ka10018_14072020124613_1407f_1594710973_8.jpg)
ಚಿಟ್ಟೆ, ಹೆಜ್ಜೆ ಧಾರಾವಾಹಿ ಮೂಲಕ ಕಿರುತೆರೆ ಯಾನ ಶುರು ಮಾಡಿದ ದಿವ್ಯ ಉರುಡುಗ ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹುಲಿರಾಯ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ಈಕೆ ನಂತರ ಫೇಸ್ ಟು ಫೇಸ್, ಧ್ವಜ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.