ನವದೆಹಲಿ: ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಅವರ ವೆಬ್ ಸೀರೀಸ್ "XXX ಸೀಸನ್ 2"ನಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಕ್ತಾ ಕಪೂರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಕಪೂರ್‌ಗೆ ಮಧ್ಯಂತರ ರಕ್ಷಣೆ ನೀಡಿದೆ. ನವೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠದಲ್ಲಿ, "XXX ಸೀಸನ್ 2" ವೆಬ್ ಸೀರೀಸ್ನಲ್ಲಿ ಆಕ್ಷೇಪಾರ್ಹ ವಿಷಯಕ್ಕಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಏಕ್ತಾ ಕಪೂರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರು ಸುಪ್ರೀಂಕೋರ್ಟ್‌ಗೆ ತೆರಳಿದ್ದರು.
ವೆಬ್ ಸೀರೀಸ್ನಲ್ಲಿ ಅಶ್ಲೀಲ ವಿಚಾರಗಳಿವೆ ಎಂದು ಆರೋಪ ಹೊರಿಸಿ ಕಪೂರ್ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
'XXX ಅನ್ಸೆನ್ಸರ್ಡ್ ಸೀಸನ್ 2' ಸೀರೀಸ್ ಅಶ್ಲೀಲವಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದೆ. ಜೊತೆಗೆ ಸೈನ್ಯವನ್ನು ಅವಮಾನಿಸಿದೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ.