ETV Bharat / sitara

ಇದೇ ತಿಂಗಳ 20ರಂದು 'ಸರಿಗಮಪ ಸೀಸನ್ 17' ಗ್ರ್ಯಾಂಡ್​  ಫಿನಾಲೆ!! - Sarigamappa reality show Zee kanada channel

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಪ್ರಾರಂಭವಾದ ಸರಿಗಮಪ ರಿಯಾಲಿಟಿ ಶೋ‌ ಕೊರೊನಾದಿಂದದಾಗಿ ಕೆಲ ಕಾಲ ಶೂಟಿಂಗ್ ನಡೆಯದೇ ಅರ್ಧಕ್ಕೆ ನಿಂತಿತ್ತು. ಮತ್ತೆ ಜುಲೈ ನಲ್ಲಿ ಶೂಟಿಂಗ್ ಪ್ರಾರಂಭವಾಗಿದ್ದು, ಗ್ರ್ಯಾಂಡ್ ಫಿನಾಲೆ ಡಿಸೆಂಬರ್ 20 ರಂದು ನಡೆಯಲಿದೆ.

'Sarigamapa Season 17' Grand Finale on the 20th december!!
ಇದೇ ತಿಂಗಳ 20ರಂದು 'ಸರಿಗಮಪ ಸೀಸನ್ 17' ಗ್ರಾಂಡ್ ಫಿನಾಲೆ!!
author img

By

Published : Dec 14, 2020, 5:19 PM IST

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 17 ನೇ ಗ್ರ್ಯಾಂಡ್ ಫಿನಾಲೆ ಇದೇ ತಿಂಗಳ 20ರಂದು ನಡೆಯಲಿದೆ

'Sarigamapa Season 17' Grand Finale on the 20th december!!
ಇದೇ ತಿಂಗಳ 20ರಂದು 'ಸರಿಗಮಪ ಸೀಸನ್ 17' ಗ್ರ್ಯಾಂಡ್ ಫಿನಾಲೆ!!

ಅಶ್ವಿನ್ ಶರ್ಮಾ, ಶರಧಿ ಪಾಟೀಲ್, ಕಂಬದ ರಂಗಯ್ಯ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ ಸರಿಗಮಪ ಸೀಸನ್ 17 ಗ್ರಾಂಡ್ ಫಿನಾಲೆ ಹಂತ ತಲುಪಿದ್ದಾರೆ. ಸರಿಗಮಪ -17 ಗ್ರ್ಯಾಂಡ್ ಫಿನಾಲೆ ಡಿಸೆಂಬರ್ 20 ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಪ್ರಾರಂಭವಾದ ಸರಿಗಮಪ ರಿಯಾಲಿಟಿ ಶೋ‌ ಕೊರೊನಾದಿಂದಾಗಿ ಕೆಲ ಕಾಲ ಶೂಟಿಂಗ್ ನಡೆಯದೇ ಅರ್ಧಕ್ಕೆ ನಿಂತಿತ್ತು. ಮತ್ತೆ ಜುಲೈ ನಲ್ಲಿ ಶೂಟಿಂಗ್ ಪ್ರಾರಂಭವಾಗಿದ್ದು, ವರ್ಷದ ಅಂತ್ಯಕ್ಕೆ ಮುಗಿಯಲಿದೆ.‌

ಶ್ರೀನಿಧಿ ಶಾಸ್ತ್ರಿ ಕ್ವಾರ್ಟರ್ ಫೈನಲ್ ಕಂತಿನಿಂದ ನೇರವಾಗಿ ಫಿನಾಲೆ ತಲುಪಿದ ಹೆಗ್ಗಳಿಕೆ ಪಡೆದಿದ್ದಾರೆ. ಉಳಿದಂತೆ ನಾಲ್ವರು ತಮ್ಮ ಗಾಯನದ ಮೂಲಕ ಪ್ರೇಕ್ಷಕರ‌ ಮನಗೆದ್ದು ಸೆಮಿಫೈನಲ್ ಹಂತ ತಲುಪಿದ್ದಾರೆ.

ಸಂಗೀತ ನಿರ್ದೇಶಕ ಡಾ. ಹಂಸಲೇಖ, ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಈ ಬಾರಿಯ ಶ್ರೇಷ್ಠ ಗಾಯಕರನ್ನು ಆಯ್ಕೆ ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.