ಲಾಕ್ಡೌನ್ ಮುಗಿದ ನಂತರ ಅನೇಕ ಜನಪ್ರಿಯ ಧಾರಾವಾಹಿಗಳು ಸದ್ದಿಲ್ಲದೆ ಮುಕ್ತಾಯಗೊಂಡಿದ್ದವು. ಇದೀಗ ನಟಿ ಸುಪ್ರಿತಾ ಸತ್ಯನಾರಾಯಣ್ ಮತ್ತು ನಟ ಸ್ಕಂದ ಅಶೋಕ್ ನಟನೆಯ ‘ಸರಸು’ ಧಾರಾವಾಹಿ ಮುಕ್ತಾಯಗೊಂಡಿದೆ. ಈ ವಿಚಾರವನ್ನು ಸ್ವತಃ ಸುಪ್ರಿತಾ ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಷಯ ತಿಳಿಸಲು ಒಂದು ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಸುಪ್ರೀತಾ ಅವರು, ಧಾರಾವಾಹಿ ತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ನವೆಂಬರ್ 2020ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಿದ್ದ ಸರಸು ಧಾರಾವಾಹಿ ಇತ್ತೀಚೆಗಷ್ಟೇ 200 ಕಂತುಗಳನ್ನು ಸಹ ಮುಗಿಸಿತ್ತು. ಈ ಧಾರಾವಾಹಿಯ ಕೊನೆಯ ಸಂಚಿಕೆ ಆಗಸ್ಟ್ 28 ರಂದು ಪ್ರಸಾರವಾಯಿತು.
ಸರಸು ಧಾರಾವಾಹಿಯ ಕಥೆ ಓರ್ವ ವಿದ್ಯಾರ್ಥಿನಿಯ ಸುತ್ತ ಸುತ್ತುತ್ತದೆ, ಆಕೆ ಶಿಕ್ಷಕಿಯಾಗಲು ಬಯಸುತ್ತಾಳೆ. ಆದರೆ ಆಕೆಯ ತಂದೆ ಅವಳನ್ನು ಮದುವೆ ಆಗುವಂತೆ ಒತ್ತಾಯಿಸಿದಾಗ, ವಿದ್ಯಾರ್ಥಿನಿ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಅಸಾಧಾರಣವಾದ ಪ್ರಯಾಣವನ್ನು ಆರಂಭಿಸುತ್ತಾಳೆ. ಈ ಕಥೆಯನ್ನಿಟ್ಟುಕೊಂಡು ಧಾರಾವಾಹಿ ನಿರ್ಮಾಣವಾಗಿತ್ತು.
ಧಾರಾವಾಹಿ ಮುಕ್ತಾಯಕ್ಕೆ ಸೂಕ್ತ ಕಾರಣವನ್ನು ಧಾರಾವಾಹಿ ತಂಡ ತಿಳಿಸಿಲ್ಲ. ಸರಸು ಬಂಗಾಳಿ ಧಾರಾವಾಹಿ 'ಮೊಹೋರ್' ನ ರೀಮೇಕ್ ಆಗಿದ್ದರೂ, ನಮ್ಮ ನೇಟಿವಿಟಿಗೆ ತಕ್ಕಂತೆ ನಿರೂಪಣೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿತ್ತು. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದ ನಟ ಅಭಿಜಿತ್ ಅವರು, ನಾಯಕನ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು.