ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಪೌರಾಣಿಕ ಧಾರಾವಾಹಿ 'ಹರಹರ ಮಹಾದೇವ ' ಮರುಪ್ರಸಾರ ಆರಂಭಿಸಿ ವಾರಗಳೇ ಕಳೆದಿವೆ. ಈ ಧಾರಾವಾಹಿಯಲ್ಲಿ ಮಹಾದೇವನ ಪತ್ನಿಯಾಗಿ ನಟಿಸಿದ್ದ ಸಂಗೀತ ಶೃಂಗೇರಿ ಇದೀಗ ಬಹಳ ಖುಷಿಯಲ್ಲಿದ್ದಾರೆ. ಲಾಕ್ಡೌನ್ ನೆಪದಲ್ಲಿ ತಾವು ನಟಿಸಿರುವ ಧಾರಾವಾಹಿ ಮರುಪ್ರಸಾರ ಕಾಣುತ್ತಿರುವುದೇ ಅವರ ಸಂತಸಕ್ಕೆ ಕಾರಣ.
- " class="align-text-top noRightClick twitterSection" data="
">
'ಹರಹರ ಮಹಾದೇವ ' ಧಾರಾವಾಹಿಯ ಸತಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಗೀತ ಅವರಿಗೆ ಅದು ಮೊದಲ ಧಾರಾವಾಹಿಯೂ ಆಗಿತ್ತು. ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ಚೆಲುವೆ ಸಂಗೀತ ಯಶಸ್ಸಿನ ಉತ್ತುಂಗಕ್ಕೆ ಏರಿದರು. 'ಕಲಾವಿದರು ಎಂದ ಮೇಲೆ ಅವರು ಮಾಡುವ ಮೊದಲ ಪ್ರಾಜೆಕ್ಟ್ ಅವರಿಗೆ ಎಂದೂ ಮರೆಯಲು ಸಾಧ್ಯವಿಲ್ಲ. ನನಗೂ ಕೂಡಾ ಅಷ್ಟೇ. ಧಾರಾವಾಹಿಯಲ್ಲಿ ಅಭಿನಯಿಸುವುದಕ್ಕಾಗಿ ಮೊದಲ ಬಾರಿ ಪೋಷಕರಿಂದ ದೂರ ಉಳಿದಿದ್ದೆ. ಕ್ಯಾಮರಾ ಎಂಬುದು ಆಗ ಹೊಸದು. ಮೊದಲ ಬಾರಿ ಕ್ಯಾಮರಾ ಎದುರು ಬಂದಾಗ ಸ್ವಲ್ಪ ನರ್ವಸ್ ಆಗಿದ್ದೆ. ಬಾಡಿ ಲ್ಯಾಂಗ್ವೇಜ್, ಡೈಲಾಗ್ , ಐ ಕ್ಯಾಂಟಾಕ್ಟ್ ಎಲ್ಲವೂ ಪರ್ಫೆಕ್ಟ್ ಇರಬೇಕಿತ್ತು. ಈ ಕಾರಣದಿಂದ ಬಹಳ ಭಯ ಇತ್ತು. ಇಂದು ನಾನು ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿದ್ದೇನೆ ಎಂದರೆ ಅದಕ್ಕೆ ಸತಿ ಪಾತ್ರವೇ ಕಾರಣ. ಜನರು ನನ್ನನ್ನು ಸ್ವೀಕರಿಸುತ್ತಾರೆ, ರಾಜ್ಯಾದ್ಯಂತ ಮನೆ ಮಾತಾಗುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ' ಎಂದು ಹೇಳುವ ಸಂಗೀತ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777 ' ಹಾಗೂ 'ಮಾರಿಗೋಲ್ಡ್ ' ಚಿತ್ರದಲ್ಲಿ ದಿಗಂತ್ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.