ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿದ ಹಲವರು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ರಾಧಿಕಾ ಪಂಡಿತ್, ರಚಿತಾ ರಾಮ್, ಶ್ವೇತಾ ಚಂಗಪ್ಪ, ನಿತ್ಯಾ ರಾಮ್, ಮಯೂರಿ ಕ್ಯಾತರಿ, ಅನುಪಮಾ ಗೌಡ ಹೀಗೆ ಸಾಲು ಸಾಲು ನಟಿಯರು ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
![Sangeeta Shringeri](https://etvbharatimages.akamaized.net/etvbharat/prod-images/6373125_1086_6373125_1583944441852.png)
ಇವರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಶೃಂಗೇರಿಯ ಬೆಡಗಿ ಸಂಗೀತ. ಸ್ಟಾರ್ ಸುವರ್ಣ ವಾಹಿನಿಯ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಸತಿಯಾಗಿ ನಟಿಸಿ ಮನೆ ಮಾತಾಗಿರುವ ಸಂಗೀತ ಶೃಂಗೇರಿ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸತಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಸಂಗೀತ ಮೊದಲ ಧಾರಾವಾಹಿಯಲ್ಲೇ ಪ್ರೇಕ್ಷಕರಿಗೆ ಬಹಳ ಹತ್ತಿರವಾದರು. 'ಎ ಪ್ಲಸ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಂಗೀತ ನಂತರ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.
![Sangeeta Shringeri](https://etvbharatimages.akamaized.net/etvbharat/prod-images/6373125_451_6373125_1583944626282.png)
ಈಗ ದೂದ್ ಪೇಡಾ ದಿಗಂತ್ಗೆ ಸಂಗೀತ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಮಾರಿಗೋಲ್ಡ್ ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೊಮ್ಮೆ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿರುವ ಈಕೆಗೆ ಅಭಿನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಚಾಲೆಂಜಿಂಗ್ ಆದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ. ಆದ್ದರಿಂದ ಬಂದ ಕಥೆಗಳನ್ನೆಲ್ಲಾ ಒಪ್ಪಿಕೊಳ್ಳದ ಸಂಗೀತ, ಪಾತ್ರದ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿದ್ದಾರೆ.
![Sangeeta Shringeri](https://etvbharatimages.akamaized.net/etvbharat/prod-images/kn-bng-06-sangeetha-movie-photo-ka10018_11032020184653_1103f_1583932613_1073.jpg)