ETV Bharat / sitara

ಸೂಪರ್ ಸ್ಟಾರ್ ಅಭಿನಯದ 'ರೋಬೋ' ಕನ್ನಡ ಡಬ್ಬಿಂಗ್ ಕಿರುತೆರೆಯಲ್ಲಿ ಪ್ರಸಾರ - S Shankar direction Robo

ಕಲಾನಿಧಿ ಮಾರನ್ ನಿರ್ಮಾಣದಲ್ಲಿ ಎಸ್​​​. ಶಂಕರ್ ನಿರ್ದೇಶನದ 'ರೋಬೋ' ಸಿನಿಮಾ ಕನ್ನಡಕ್ಕೆ 'ಬೊಂಬಾಟ್ ರೋಬೋ' ಹೆಸರಿನಲ್ಲಿ ಡಬ್ ಆಗಿದ್ದು ಸೆಪ್ಟೆಂಬರ್ 19 ರಂದು ಉದಯ ಟಿವಿಯಲ್ಲಿ ಸಂಜೆ 6.30ಕ್ಕೆ ಪ್ರಸಾವಾಗಲಿದೆ.

Robo movie in Udaya TV
'ಬೊಂಬಾಟ್ ರೋಬೋ'
author img

By

Published : Sep 17, 2020, 11:46 AM IST

ಸೂಪರ್ ಸ್ಟಾರ್ ರಜನಿಕಾಂತ್​​​​​​​​​​ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅಭಿನಯದ 'ರೋಬೋ' ಸಿನಿಮಾ ಹಾಗೂ ಆ ಚಿತ್ರದ ಹಾಡುಗಳು ಬಹಳ ಹಿಟ್ ಆಗಿತ್ತು. 2010 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಕನ್ನಡದಲ್ಲಿ ಡಬ್ಬಿಂಗ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

Robo movie in Udaya TV
'ಬೊಂಬಾಟ್ ರೋಬೋ' (ಫೋಟೋ ಕೃಪೆ: ಉದಯ ಟಿವಿ)

ಕನ್ನಡ ಡಬ್ಬಿಂಗ್​​​​​ಗೆ 'ಬೊಂಬಾಟ್ ರೋಬೋ' ಎಂದು ಹೆಸರಿಡಲಾಗಿದೆ. ಸೆಪ್ಟೆಂಬರ್ 19 ಶನಿವಾರ ಸಂಜೆ 6.30ಕ್ಕೆ ಈ 'ರೋಬೋ' ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಬೊಂಬಾಟ್ ರೋಬೋ ಸೈನ್ಸ್ ಫಿಕ್ಷನ್ , ಆ್ಯಕ್ಷನ್​​​ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಎಸ್​​. ಶಂಕರ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಇದು 'ಎಂದಿರನ್ ' ಫ್ರಾಂಚೈಸ್​​​​ನ ಮೊದಲ ಕಂತು. ಈ ಚಿತ್ರದಲ್ಲಿ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್, ಡ್ಯಾನಿ ಡೆನ್ಜೊಗ್ಪಾ, ಸಂತಾನಮ್, ಕರುಣಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್​. ರೆಹಮಾನ್ ಸಂಗೀತ ನೀಡಿದ್ದಾರೆ. ಚಿಟ್ಟಿ ಎಂಬ ರೋಬೋಟನ್ನು ತಯಾರಿಸುವ ವಿಜ್ಞಾನಿ ವಶೀಕರನ್ ಅದರಲ್ಲಿ ಮನುಷ್ಯನ ಭಾವನೆಗಳನ್ನೂ ತುಂಬುತ್ತಾನೆ. ಇದರಿಂದ ಆತ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಆ ಸಮಸ್ಯೆಗಳಿಗೆ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ಕಥೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.