ETV Bharat / sitara

ಶಿಕ್ಷಣ ಇಲಾಖೆಯಿಂದ ಎರಡನೇ ಬಾರಿ ಆ ಕಾರ್ಯಕ್ಕೆ ಆಯ್ಕೆಯಾದ ರ್‍ಯಾಪರ್...! - Save government schools campaign

ಖ್ಯಾತ ರ್‍ಯಾಪರ್ ಅಲೋಕ್ ಬಾಬು ಎರಡನೇ ಬಾರಿ ಶಿಕ್ಷಣ ಇಲಾಖೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಅಲೋಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಒಬ್ಬ ಕಲಾವಿದನಾಗಿ ಇಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಲು ನನಗೆ ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ.

Rapper Alok babu
ಅಲೋಕ್ ಬಾಬು
author img

By

Published : Nov 27, 2020, 1:05 PM IST

ಸರ್ಕಾರದ ವತಿಯಿಂದ ಸೆಲಬ್ರಿಟಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವುದು ಸಾಮಾನ್ಯ. ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಚಾಮರಾಜನಗರ ಜಿಲ್ಲೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಫ್ರೌಡ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪುನೀತ್ ರಾಜ್​​​​ಕುಮಾರ್​ ಅವರನ್ನು ಖುದ್ದು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಈಗ ಶಿಕ್ಷಣ ಇಲಾಖೆ ವತಿಯಿಂದ ರ್‍ಯಾಪರ್ ಅಲೋಕ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.

ವಿಶೇಷ ಎಂದರೆ ಅಲೋಕ್ ಶಿಕ್ಷಣ ರಾಯಭಾರಿಯಾಗಿ ಆಯ್ಕೆ ಆಗಿರುವುದು ಇದು ಎರಡನೇ ಬಾರಿ. ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ವತಿಯಿಂದ ನೀಡಲಾದ ಪ್ರಮಾಣಪತ್ರ ಹಿಡಿದಿರುವ ಫೋಟೋವನ್ನು ಅಲೋಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ನಾನು ಶಿಕ್ಷಣ ಬಾರಿಯಾಗಿ ಈ ಅಭಿಯಾನಕ್ಕೆ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಅಭಿಯಾನದಡಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡುತ್ತೇವೆ. ಕಳೆದ ಬಾರಿ ಕೊಡಗು ಹಾಗೂ ಮೈಸೂರಿನಲ್ಲಿ ಎರಡು ಶಾಲೆಗಳನ್ನು ದತ್ತು ಪಡೆದಿದ್ದೆವು. ಈ ಬಾರಿ ಕೊರೊನಾ ಸಮಸ್ಯೆಯಿಂದ ಈ ಕಾರ್ಯ ತಡವಾಯ್ತು. ಈಗ ಮತ್ತೆ ಕೆಲಸ ಆರಂಭಿಸಲು ಕಾಯುತ್ತಿದ್ದೇವೆ. ಒಬ್ಬ ಕಲಾವಿದನಾಗಿ ಇಂತಹ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಲು ಬಹಳ ಸಂತೋಷವಾಗುತ್ತಿದೆ. ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ನೀಡಿದ್ದೀರಿ. ಜನರಿಗಾಗಿ ಏನಾದರೂ ಒಳಿತು ಮಾಡಲು ನನಗೆ ಮತ್ತೊಮ್ಮೆ ಸದಾವಕಾಶ ಒದಗಿ ಬಂದಿದೆ. ಶಾಲೆಯಲ್ಲಿ ಎಲ್ಲಾ ವಯಸ್ಸಿನ ಮಕ್ಕಳಿಗೆ ಸಂಗೀತ ತರಗತಿ ಇರಬೇಕೆಂಬುದು ನನ್ನ ಕನಸು'' ಎಂದು ಅಲೋಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Rapper Alok babu
ರ್‍ಯಾಪರ್ ಅಲೋಕ್ ಬಾಬು

ರ್‍ಯಾಪರ್ ಆರ್​​​. ಅಲೋಕ್ ಬಾಬು , ಆಲ್ ಓಕೆ ಎಂದೇ ಫೇಮಸ್, ಅನೇಕ್ ರ್‍ಯಾಪ್ ಹಾಡುಗಳನ್ನು ಹಾಡಿರುವ ಅಲೋಕ್ ಅವರ ಇತ್ತೀಚೆಗಿನ 'ಹ್ಯಾಪಿ ವಿಡಿಯೋ'ಗೆ ಸಖತ್ ರೆಸ್ಪಾನ್ಸ್ ದೊರೆತಿದೆ. ಏನು ಮಾಡೋದು ಮುಂದೆ ಏನು ಮಾಡೋದು..ಎಂಬ ಸಾಲಿನಿಂದ ಆರಂಭವಾಗುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದುವರೆಗೂ 4 ಮಿಲಿಯನ್​​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದೀಗ ಹೊಸ ವರ್ಷಕ್ಕಾಗಿ ಮತ್ತೊಂದು ಹಾಡನ್ನು ಅಲೋಕ್ ರೆಡಿ ಮಾಡುತ್ತಿದ್ದು ಇದು ಕನ್ನಡದೊಂದಿಗೆ ಇತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಎಂದು ಆಲ್ ಓಕೆ ಹೇಳಿದ್ದಾರೆ.

  • " class="align-text-top noRightClick twitterSection" data="">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.