'ಬಾ ಬಾ ನೀ ವೋಟ್ ಹಾಕು ಬಾ' ....ಗೀತೆಗೆ ರಾಜ್ ಮಹಿ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ರ‍್ಯಾಪ್ ಶೈಲಿಯ ಈ ಸಾಂಗ್ಗೆಸಂಗೀತ ನಿರ್ದೇಶಕ ಜೇಮ್ಸ್ ಮೈಕಲ್ರಾಗ ಸಂಯೋಜನೆ ಮಾಡಿದ್ದಾರೆ . ಛಾಯಾಗ್ರಹಕ ವಿಜಯ್ ಉತ್ತರ ಕರ್ನಾಟಕದ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ. ಈ ಹಾಡಿಗೆ ಬಾಬಾ ರಾಮ್ ದೇವ್, ಅಶೋಕ್ ಹಾರನಹಳ್ಳಿ, ನಟ ಅನಿರುಧ್, ಚಂದ್ರಶೇಖರ್ ಬಂಡಿಯಪ್ಪ, ಅರುಣ ಬಲರಾಜ್, ಸುನೇತ್ರ ಪಂಡಿತ್ ಹಾಗೂ ಇತರರು ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="">
ಈ ಹಾಡಿನ ಉದ್ದೇಶ ಜನ ಮತಗಟ್ಟೆಗೆ ಬಂದು ತಪ್ಪದೇ ವೋಟ್ ಹಾಕುವುದಾಗಿದೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಗೆ ಯೋಗರಾಜ ಭಟ್ಟರಿಂದ ಚುನಾವಣಾ ಅಧಿಕಾರಿಗಳು ಒಂದು ಹಾಡು ಬರೆಸಿದ್ದರು. ಅದನ್ನು ವೀಡಿಯೋ ಮುಖಾಂತರ ಸಹ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಚುನಾವಣಾ ಆಯೋಗ ಯಾವುದೇ ಹಾಡು ಬಿಡುಗಡೆ ಮಾಡಿಲ್ಲ. ಆದ್ದರಿಂದ ವೋಟಿನ ಮಹತ್ವ ಸಾರಲು ‘ಬಾ ಬಾ ನೀ ವೋಟ್ ಹಾಕು ಬಾ' ಸಾಂಗ್ ರೆಡಿಯಾಗಿದೆ.