ಲಾಕ್ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಮರುಪ್ರಸಾರ ಕಂಡ ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯನ್ನು ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದರು. 1987 ರಲ್ಲಿ ಈ ಧಾರಾವಾಹಿಯನ್ನು ನೋಡಿದ್ದ ಎರಡು ಪಟ್ಟು ಜನರು ಈಗ ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
- " class="align-text-top noRightClick twitterSection" data="
">
ಈ ಧಾರಾವಾಹಿ ಪ್ರಸಾರವಾದ ನಂತರ ದೂರದರ್ಶನ ಇತರ ಚಾನಲ್ಗಳನ್ನು ಹಿಂದಿಕ್ಕಿತ್ತು. ಈಗ ಅದೇ ಹಿಂದಿ 'ರಾಮಾಯಣ' ಧಾರಾವಾಹಿ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾಭಾರತ' ಧಾರಾವಾಹಿ ಕೂಡಾ ಮೊದಲ ಸ್ಥಾನದಲ್ಲಿದ್ದು, ಕನ್ಮಡ ಕಿರುತೆರೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದೆ.
ಮಹಾಭಾರತದ ನಂತರ ಜಗತ್ತಿನ ಮೊದಲ ಪ್ರೇಮಕಥೆ 'ರಾಧಾಕೃಷ್ಣ' ಕೂಡಾ ಡಬ್ ಆಗಿ ಪ್ರಸಾರ ಕಾಣುತ್ತಿದ್ದು ವೀಕ್ಷಕರು ಫಿದಾ ಆಗಿದ್ದಾರೆ. ಇದೀಗ ಆ ಸಾಲಿಗೆ 'ರಾಮಾಯಣ' ಹೊಸದಾಗಿ ಸೇರ್ಪಡೆಯಾಗಿದೆ . ಅಂದ ಹಾಗೆ ಡಬ್ ಆಗಿರುವ 'ಮಹಾಭಾರತ' ಧಾರಾವಾಹಿಗೆ ದೊರೆತ ಪ್ರೋತ್ಸಾಹ, ಬೆಂಬಲವೇ 'ರಾಮಾಯಣ'ವನ್ನು ಕನ್ನಡಕ್ಕೆ ಡಬ್ ಮಾಡಲು ಪ್ರೇರಣೆ ಎನ್ನುವ ಸುವರ್ಣ ವಾಹಿನಿ, ಧಾರಾವಾಹಿ ಯಾವ ದಿನಾಂಕ ಹಾಗೂ ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ವಿಚಾರವನ್ನು ಇನ್ನೂ ಬಹಿರಂಗಪಡಿಸಿಲ್ಲ.