ಕನ್ನಡದಲ್ಲಿ ಇತ್ತೀಚೆಗೆ ವೆಬ್ ಸೀರೀಸ್ ಟ್ರೆಂಡ್ ಹೆಚ್ಚಾಗುತ್ತಿದೆ. ರವಿ ಶಾಮನೂರು ಫಿಲ್ಮ್ಸ್ ಬ್ಯಾನರ್ ಅಡಿ ಡಾ. ರವಿ ಶಾಮನೂರು ಮೊದಲ ಬಾರಿಗೆ ನಿರ್ಮಿಸಿರುವ ರಾಮ್ತೇಜ ನಿರ್ದೇಶನದ 'ಸೈಕೋ' ವೆಬ್ ಸೀರೀಸ್ ಇಂದಿನಿಂದ ವಿ 4 ಸ್ಟ್ರೀಮ್ ಒಟಿಟಿಯಲ್ಲಿ ಪ್ರಸಾರವಾಗಲಿದೆ.
- " class="align-text-top noRightClick twitterSection" data="">
ಈ ವೆಬ್ ಸೀರೀಸ್ ಬಹುತೇಕ ಮಂಗಳೂರು ಭಾಗದಲ್ಲಿ ಚಿತ್ರೀಕರಿಸಲಾಗಿದೆ. 'ಪಂಚತಂತ್ರ' ಖ್ಯಾತಿಯ ನಟ ಸೋನಾಲ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಚರಣ್ ಸುವರ್ಣ ನಿರ್ಮಾಣ ವಿನ್ಯಾಸ ಕೆಲಸ ನಿರ್ವಹಿಸಿದ್ದಾರೆ. 'ಟಕ್ಕರ್' ಸಿನಿಮಾ ನಾಯಕ, ದರ್ಶನ್ ಸಂಬಂಧಿ ಮನೋಜ್ ತೂಗುದೀಪ್, 'ಡಿಯರ್ ಸತ್ಯ' ನಾಯಕ ಆರ್ಯನ್ ಸಂತೋಷ್ ಹಾಗೂ ಇನ್ನಿತರರು ಈ ವೆಬ್ ಸೀರೀಸ್ಗೆ ಶುಭ ಹಾರೈಸಿದ್ದಾರೆ.

ಸುಮಾರು 15 ವರ್ಷಗಳಿಂದ ಸಹಾಯಕ ನಿರ್ದೇಶಕ ಆಗಿ ಪಿ.ಎನ್. ಸತ್ಯ ಅವರ ಗರಡಿಯಲ್ಲಿ ಪಳಗಿದ ರಾಮ್ ತೇಜ, ಸಿನಿಮಾ ನಿರ್ದೇಶನದ ಬದಲು ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಹೆಸರಾದ ಅಮಿತ್ ರಾವ್ ಈ ಸೀರೀಸ್ನಲ್ಲಿ ಫ್ಯಾಷನ್ ಫೋಟೋಗ್ರಾಫರ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೇಯಾ ಶೆಟ್ಟಿ, ನಿರ್ದೇಶಕ ಮಂಜು ದೈವಜ್ಞ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸೈಕೋ' ವೆಬ್ ಸೀರೀಸ್ ಒಟ್ಟು 6 ಕಂತುಗಳಲ್ಲಿ ಪ್ರಸಾರವಾಗಲಿದ್ದು ಒಂದೊಂದು ಎಪಿಸೋಡ್ 20 ನಿಮಿಷ ಇದೆ. ಈ ಸೀರೀಸ್ಗೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಕಾದು ನೋಡಬೇಕು.
- " class="align-text-top noRightClick twitterSection" data="">