ETV Bharat / sitara

ಕಿರುತೆರೆ, ಹಿರಿತೆರೆಯಲ್ಲೂ ಗುರುತಿಸಿಕೊಂಡಿರುವ 'ಮಗಳು ಜಾನಕಿ' ಖ್ಯಾತಿಯ ರಾಕೇಶ್​​ ಮಯ್ಯ - ಫೋಟೋಜರ್ನಲಿಸ್ಟ್​​ ಆಗಿ ಕೆಲಸ ಮಾಡಿದ್ದ ರಾಕೇಶ್ ಮಯ್ಯ

ಯಾವುದೇ ರೀತಿಯ ನಟನಾ ತರಬೇತಿಯಿಲ್ಲದೆ ಇಂದು ಬಣ್ಣದ ಲೋಕದಲ್ಲಿ ನಾನು ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ವಿನು ಬಳಂಜ ಅವರೇ ಕಾರಣ. ವಿನು ಅವರು ನನ್ನ ತಪ್ಪುಗಳನ್ನು ತಿದ್ದಿ, ಸರಿ ಮಾಡಿರುವುದಲ್ಲದೆ ನನಗೆ ಸದಾಕಾಲ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎನ್ನುತ್ತಾರೆ ರಾಕೇಶ್ ಮಯ್ಯ.

Rakesh Maiya acting in movies
ರಾಕೇಶ್ ಮಯ್ಯ
author img

By

Published : Dec 2, 2019, 7:49 PM IST

ಟಿ.ಎನ್​​​​.ಸೀತಾರಾಂ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಪಾತ್ರಧಾರಿ ಬಹುತೇಕ ಎಲ್ಲರಿಗೂ ಪರಿಚಯ. ರಾಕೇಶ್ ಮಯ್ಯ ಅವರಿಗೆ ಬಣ್ಣದಲೋಕ ಹೊಸತೇನಲ್ಲ. ಬಿ.ಸುರೇಶ್ ನಿರ್ದೇಶನದ 'ಪ್ರೀತಿ ಪ್ರೇಮ' ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ರಾಕೇಶ್ ಮಯ್ಯ, ಮುಂದೆ ವಿನು ಬಳಂಜ ನಿರ್ದೇಶನದ 'ಲವ್ ಲವಿಕೆ' ಧಾರಾವಾಹಿಯಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Rakesh maiya acted in Avalu serial first
ರಾಕೇಶ್​ ಮಯ್ಯ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು 'ಅವಳು' ಧಾರಾವಾಹಿಯಲ್ಲಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಹಾರಿಕಾ' ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು 'ಅವಳು' ಧಾರಾವಾಹಿಯಲ್ಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವಳು' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಮಿಂಚಿರುವ ಇವರು, ಸದ್ಯ 'ಮಗಳು ಜಾನಕಿ'ಯಲ್ಲಿ ಜಾನಕಿಯ ಗಂಡ ನಿರಂಜನ್ ಆಗಿ ಅಭಿನಯಿಸುತ್ತಿದ್ದಾರೆ. ಬಾಲ್ಯದಿಂದಲೂ ನನಗೆ ನಟನಾಗಬೇಕು ಎಂಬ ಬಹು ದೊಡ್ಡ ಕನಸಿತ್ತು. ಅದು ನನಸಾದದ್ದು 'ಲವ್ ಲವಿಕೆ' ಧಾರಾವಾಹಿ ಮೂಲಕ. ಯಾವುದೇ ರೀತಿಯ ನಟನಾ ತರಬೇತಿಯಿಲ್ಲದೆ ಇಂದು ಬಣ್ಣದಲೋಕದಲ್ಲಿ ನಾನು ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ವಿನು ಬಳಂಜ ಅವರೇ ಕಾರಣ. ವಿನು ಅವರು ನನ್ನ ತಪ್ಪುಗಳನ್ನು ತಿದ್ದಿ, ಸರಿ ಮಾಡಿರುವುದಲ್ಲದೆ ನನಗೆ ಸದಾಕಾಲ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎನ್ನುತ್ತಾರೆ ರಾಕೇಶ್ ಮಯ್ಯ.

Rakesh maiya worked as Photojournalist
ಫೋಟೋ ಜರ್ನಲಿಸ್ಟ್ ಆಗಿ ಕೂಡಾ ಕೆಲಸ ಮಾಡಿರುವ ರಾಕೇಶ್ ಮಯ್ಯ

ಎಂಬಿಎ ಪದವೀಧರರಾಗಿರುವ ರಾಕೇಶ್ ಮಯ್ಯ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಫೊಟೋಗ್ರಾಫಿಯತ್ತ ಕೂಡಾ ವಿಶೇಷ ಒಲವು ಹೊಂದಿದ್ದ ಅವರು, ನಂತರ ಪತ್ರಿಕೆಯೊಂದರಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಆರಂಭಿಸಿದರು. ಮುಂದೆ 'ಲವ್ ಲವಿಕೆ' ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರು, ಕಿರುಚಿತ್ರಗಳ ಮೂಲಕವೂ ಮನೆ ಮಾತಾಗಿದ್ದಾರೆ. ಸಿಲ್ಕ್ ಬೋರ್ಡ್ ಟ್ರಾಫಿಕ್ ಲವ್ ಸ್ಟೋರಿ, ಮರೀಚಿಕೆ, ಅನಾಹುತ, ಹ್ಯಾಪಿ ಬ್ರೇಕ್ ಅಪ್, ಬಿಸಿ ಬೇಳೆ ಬಾತ್ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಗಣೇಶ್ ಅಭಿನಯದ '96' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿದ್ದಾರೆ.

Rakesh Maiya started his Career
'ಪ್ರೀತಿ ಪ್ರೇಮ' ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ರಾಕೇಶ್ ಮಯ್ಯ

Intro:Body:ಟಿ ಎನ್ ಸೀತಾರಾಂ ನಿರ್ದೇಶನದಲ್ಲಿ ಮಗಳು ಜಾನಕಿ ಧಾರಾವಾಹಿಯಲ್ಲಿ ನಿರಂಜನ್ ಪಾತ್ರಧಾರಿಯಾಗಿ ಅಭಿನಯಿಸುತ್ತಿರಿವ ರಾಕೇಶ್ ಮಯ್ಯ ರಿಗೆ ಬಣ್ಣದ ಲೋಕ ಹೊಸತೇನಲ್ಲ! ಬಿ ಸುರೇಶ್ ನಿರ್ದೇಶನದ ಪ್ರೀತಿ ಪ್ರೇಮ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ರಾಕೇಶ್ ಮಯ್ಯ ಮುಂದೆ ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಧಾರಾವಾಹಿಯಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಹಾರಿಕಾ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ ಅವರು ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು ಅವಳು ಧಾರಾವಾಹಿಯಲ್ಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವಳು ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಮಿಂಚಿರುವ ಇವರು ಸದ್ಯ ಮಗಳು ಜಾನಕಿ ಯಲ್ಲಿ ಜಾನಕಿಯ ಗಂಡ ನಿರಂಜನ್ ಆಗಿ ಅಭಿನಯಿಸುತ್ತಿದ್ದಾರೆ.

" ಬಾಲ್ಯದಿಂದಲೂ ನನಗೆ ನಟನಾಗಬೇಕು ಎಂಬ ಬಹು ದೊಡ್ಡ ಕನಸಿತ್ತು. ಅದು ನನಸಾದದ್ದು ಲವ್ ಲವಿಕೆ ಧಾರಾವಾಹಿ ಮೂಲಕ. ಯಾವುದೇ ರೀತಿಯ ನಟನಾ ತರಬೇತಿಯಿಲ್ಲದೇ ಇಂದು ಬಣ್ಣದ ಲೋಕದಲ್ಲಿ ನಾನು ಅಭಿನಯದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ವಿನು ಬಳಂಜ ಅವರೇ ಮೂಲಕ ಕಾರಣ. ನನ್ನ ತಪ್ಪುಗಳನ್ನು ತಿದ್ದಿ ಸರಿ ಮಾಡಿರುವುದಲ್ಲದೇ ನನಗೆ ಪ್ರೋತ್ಸಹವನ್ನು ಕೂಡಾ ನೀಡಿದ್ದಾರೆ ಎಂದು ಹೇಳುತ್ತಾರೆ ರಾಕೇಶ್ ಮಯ್ಯ.

ಎಂಬಿಎ ಪದವಿಧರರಾಗಿರುವ ರಾಕೇಶ್ ಮಯ್ಯ ಮುಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಫೊಟೋಗ್ರಫಿಯತ್ತ ವಿಶೇಷ ಒಲವು ಹೊಂದಿದ್ದ ಅವರು ನಂತರ ವಿಜಯವಾಣಿ
ಯಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಆರಂಭಿಸಿದರು. ಮುಂದೆ ಲವ್ ಲವಿಕೆ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರು ಕಿರುಚಿತ್ರಗಳ ಮೂಲಕವೂ ಮನೆ ಮಾತಾಗಿದ್ದಾರೆ. ಸಿಲ್ಕ್ ಬೋರ್ಡ್ ಟ್ರಾಫಿಕ್ ಲವ್ ಸ್ಟೋರಿ, ಮರೀಚಿಕೆ, ಅನಾಹುತ, ಹ್ಯಾಪಿ ಬ್ರೇಕ್ ಅಪ್, ಬಿಸಿ ಬೇಳೆ ಬಾತ್ ಎಂಬ ಸಾಲು ಸಾಲು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ 96 ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.