ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕಿರುತೆರೆಯ ಮುದ್ದಾದ ನಟಿ ರಾಧಿಕಾ ರಾವ್ ಲಾಕ್ ಡೌನ್ ಸಮಯವನ್ನು ಪತಿ ಹಾಗೂ ಮನೆಯವರೊಂದಿಗೆ ಸಂತಸದಿಂದ ಕಳೆಯುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಆಕರ್ಷ್ ಭಟ್ ಎಂಬುವರೊಂದಿಗೆ ರಾಧಿಕಾ ರಾವ್ ಸಪ್ತಪದಿ ತುಳಿದಿದ್ದರು.
- " class="align-text-top noRightClick twitterSection" data="
">
ರಾಧಿಕಾ ರಾವ್ ತಮ್ಮ ಮತ್ತು ಪತಿಯ ನಡುವಿನ ಸಂಬಂಧ ಯಾವ ರೀತಿ ಗಟ್ಟಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ. ಅವರ ವಿವರಣೆಗೆ ಪತಿ ಆಕರ್ಷ್ ಭಟ್ ಕೂಡಾ ಸಾಥ್ ನೀಡಿದ್ದಾರೆ. ಯಾವುದೇ ಸಂಬಂಧ ಗಟ್ಟಿಯಾಗಿರಬೇಕೆಂದರೆ ಮೊದಲಿಗೆ ಇರಬೇಕಾದದ್ದು ನಂಬಿಕೆ. ಗಂಡ ಹೆಂಡತಿ ಮಧ್ಯೆ ಮುಚ್ಚು ಮರೆ ಇರಬಾರದು. ಎಲ್ಲಾ ವಿಷಯವನ್ನು ಮುಕ್ತವಾಗಿ ಒಬ್ಬರಿಗೊಬ್ಬರು ಹಂಚಿಕೊಳ್ಳಬೇಕು. ಇಬ್ಬರ ನಡುವೆ ಪಾರದರ್ಶಕತೆ ಇದ್ದಾಗ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಎನ್ನುತ್ತಾರೆ ರಾಧಿಕಾ ರಾವ್.
ಸಂಬಂಧ ಸದಾ ಕಾಲ ಉತ್ತಮವಾಗಿರಬೇಕು ಎಂದಾದರೆ ಜೋಡಿಗಳ ನಡುವೆ ಪರಸ್ಪರ ಅರ್ಥ ಮಾಡಿಕೊಳ್ಳುವ ವಿಚಾರ ಹೆಚ್ಚಾಗಿರಬೇಕು. ಈ ಗುಣ ಇಲ್ಲ ಎಂದಾದರೆ ಜಗಳಕ್ಕೆ ಮುನ್ನುಡಿ ಬರೆಯಬಹುದು. ಒಬ್ಬರಿಗೊಬ್ಬರು ಇಷ್ಟ-ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು ಆಗ ಸಂಬಂಧ ಸುಂದರವಾಗಿ ಸಾಗುತ್ತದೆ ಎಂದು ಹೇಳುತ್ತಾರೆ ರಾಧಿಕಾ ಹಾಗೂ ಪತಿ ಆಕರ್ಷ್ ಭಟ್.
ಗಂಡ ಹೆಂಡತಿಗೆ ಅವರದೇ ಆದ ಸ್ವಾತಂತ್ರ್ಯ ಮುಖ್ಯ. ಎಲ್ಲರಿಗೂ ಅವರದೇ ಆದ ಪ್ರಪಂಚವಿದೆ. ಮತ್ತು ಆ ಪ್ರಪಂಚದೊಳಗೆ ವ್ಯವರಿಸುವ ಸ್ವಾತಂತ್ಯ್ರ ಕೂಡಾ ಅವರಿಗಿದೆ. ಮಾತ್ರವಲ್ಲ ಗಂಡ ಹೆಂಡತಿಗಾಗಲಿ, ಹೆಂಡತಿ ಗಂಡನಿಗಾಗಲೀ ಇಂತದ್ದೇ ಕಾರ್ಯ ಮಾಡಬೇಕೆಂದು ಯಾವತ್ತಿಗೂ ಬಲವಂತ ಮಾಡಬಾರದು. ಅದರಲ್ಲೂ ಇಷ್ಟವಿಲ್ಲದ ಕೆಲಸವನ್ನಂತೂ ಮಾಡಲು ಒತ್ತಾಯ ಮಾಡಲೇಬಾರದು ಎನ್ನುತ್ತಾರೆ ಮುದ್ದು ಮುಖದ ಸುಂದರಿ ರಾಧಿಕಾ.
ಸಂಬಂಧಗಳ ನಡುವೆ ದೊಡ್ಡ ದೊಡ್ಡ ನಿರೀಕ್ಷೆಗಳಿರಬಾರದು. ಒಬ್ಬರಿಗೊಬ್ಬರು ನಿರೀಕ್ಷೆ ಮಾಡದೆ ಪ್ರೀತಿ ಮಾಡುವುದು ನಿಜಕ್ಕೂ ತುಂಬಾನೇ ಕಷ್ಟ. ಆದರೆ ಅದನ್ನು ಅಭ್ಯಾಸ ಮಾಡಿಕೊಂಡಾಗ ನಿರೀಕ್ಷೆಗಳಿಲ್ಲದೆ ಪ್ರೀತಿ ಮಾಡುವ ಕಲೆ ಕರಗತವಾಗುತ್ತದೆ. ಜೊತೆಗೆ ಇಬ್ಬರ ನಡುವಿನ ಸಂಬಂಧ ಮತ್ತು ಗಟ್ಟಿಯಾಗುತ್ತದೆ ಎನ್ನುತ್ತಾರೆ ಆಕರ್ಷ್.
ಇಷ್ಟು ಮಾತ್ರವಲ್ಲದೆ ಪತಿ-ಪತ್ನಿ ಜೊತೆಯಾಗಿ ಟ್ರಾವೆಲ್ ಮಾಡುವುದು ಕೂಡಾ ಒಳ್ಳೆಯದು. ಇದು ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಮಾತ್ರವಲ್ಲ ಸುಂದರವಾದ ಜರ್ನಿ ಸುಮಧುರ ನೆನಪುಗಳನ್ನು ನೀಡುತ್ತದೆ ಎನ್ನುತ್ತಾರೆ ಈ ನವ ದಂಪತಿ.