ಕಲಾವಿದರು ಎಂದರೆ ಕೇಳಬೇಕೆ? ಪ್ರತಿದಿನ ಮೇಕಪ್, ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿಯಾಗಿರುತ್ತಾರೆ. ತಮ್ಮದಲ್ಲದ ಪಾತ್ರಕ್ಕೆ ಜೀವ ತುಂಬಲು ಶ್ರಮಿಸುವ ತಾರಾಮಣಿಯರು ಸ್ವಲ್ಪ ಸಮಯ ಸಿಕ್ಕರೆ ಸಾಕಪ್ಪ, ಎಲ್ಲಾದರೂ ದೂರದೂರಿಗೆ ಟ್ರಿಪ್ ಹೋಗಿ ಬರೋಣ ಎಂದುಕೊಳ್ಳುತ್ತಾರೆ.

ಅಂದುಕೊಂಡಂತೆ ಶೂಟಿಂಗ್ನಿಂದ ಕೊಂಚ ವಿರಾಮ ದೊರೆತರೆ ಸಾಕು, ಅವರು ಮನೆಯಲ್ಲೇ ಕುಳಿತು ವಿಶ್ರಮಿಸುವುದಿಲ್ಲ. ಬದಲಿಗೆ ದೂರ ದೇಶಗಳಿಗೆ ಪ್ರವಾಸ ಹೊರಡುತ್ತಾರೆ. ಗೊತ್ತಿಲ್ಲದ ದೇಶಕ್ಕೆ ಕಾಲಿಟ್ಟು ಅದರ ಅಂದವನ್ನು ಸವಿಯುತ್ತಾ ರಜೆಯ ಮಜಾವನ್ನು ಪಡೆಯುತ್ತಾರೆ. ಕಿರುತೆರೆ ಕಲಾವಿದರೂ ಕೂಡಾ ರಜೆಯನ್ನು ಇನ್ನಷ್ಟು ಸಂತಸವಾಗಿ ಕಳೆಯಲು ದೂರ ದೇಶದ ಪ್ರವಾಸ ಹೋಗುತ್ತಿದ್ದಾರೆ. ಇದೀಗ ಕಿರುತೆರೆಯ ಬ್ಯೂಟಿಫುಲ್ ವಿಲನ್ ಸಿತಾರಾ ದೇವಿ ಕೂಡಾ ತಮ್ಮ ಪತಿಯೊಂದಿಗೆ ಅಮೆರಿಕದಲ್ಲಿ ರಜೆಯ ಮಜಾ ಎಂಜಾಯ ಮಾಡುತ್ತಿದ್ದಾರೆ. ಸಿತಾರಾ ದೇವಿ ಯಾರು ಎಂದು ಯೋಚಿಸುತ್ತೀದ್ದೀರಾ? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ರಮಣ' ಧಾರಾವಾಹಿಯ ನಾಯಕ ರಮಣನ ಅತ್ತೆಯೇ ಸಿತಾರಾ ದೇವಿ. ಬ್ಯೂಟಿಫುಲ್ ವಿಲನ್ ಎಂದೇ ಜನಜನಿತವಾಗಿರುವ ಸಿತಾರಾದೇವಿಯ ನಿಜವಾದ ಹೆಸರು ಸುಜಾತ ಅಕ್ಷಯ. ಈಗಾಗಲೇ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಸುಜಾತಾ ಬೆಳ್ಳಿತೆರೆಯಲ್ಲೂ ಮಿಂಚಿದ್ದಾಗಿದೆ. ಆದರೂ ಇಂದು ಜನ ಅವರನ್ನು ಗುರುತಿಸುವುದು ಸಿತಾರಾ ದೇವಿಯಾಗಿ. ಇಂತಿಪ್ಪ ಸಿತಾರಾದೇವಿ ಆಲಿಯಾಸ್ ಸುಜಾತಾ ಇದೀಗ ಅಮೇರಿಕಾದಲ್ಲಿದ್ದಾರೆ.

ಮಿಯಾಮಿ, ಸೌತ್ ಬೀಚ್, ಹಾಲಿವುಡ್ ಫ್ಲೊರಿಡಾ, ಪಾಮ್ ಬೀಚ್, ಲಿಟಲ್ ಹವಾನ, ಬೋಸ್ಟನ್, ನ್ಯೂಯಾರ್ಕ್ ಸೇರಿದಂತೆ ಅನೇಕ ಕಡೆ ಪ್ರವಾಸ ಕೈಗೊಂಡಿದ್ದಾರೆ. ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ತಮ್ಮ ರಜೆಯನ್ನು ಕಳೆಯುತ್ತಿದ್ದಾರೆ. ವಿವಿಧ ಬಗೆಯ ಆಹಾರಗಳನ್ನು ಸವಿಯುವ ಮೂಲಕ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.
