ETV Bharat / sitara

ಆ್ಯಂಕರ್​ ಆದ ನಟಿ ರಚಿತಾ.... ಯಾಕೀ ಅವತಾರ ಬುಲ್​ಬುಲ್​ ಬೆಡಗಿ? - Actress Rachita Ram

ಕಲರ್ಸ್​ ಕನ್ನಡದ ಪ್ರೊಮೋದಲ್ಲಿ ರಚಿತಾ ರಾಮ್​ ಆ್ಯಂಕರ್​ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ವಾಹಿನಿಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಆ್ಯಂಕರ್​ ಆದ ನಟಿ ರಚಿತಾ
ಆ್ಯಂಕರ್​ ಆದ ನಟಿ ರಚಿತಾ
author img

By

Published : May 30, 2020, 3:36 PM IST

"ನೀವು ನೋಡ್ತಾ ಇದ್ದೀರಾ ಪ್ರೈಮ್ ಟೈಮ್ ನ್ಯೂಸ್. ನಾನು ರಚಿತಾ ರಾಮ್. ಬಣ್ಣ ಹೊಸದಾಗಿದೆ ಬಂಧ ಬಿಗಿಯಾಗಿದೆ" ಅಂತಿದ್ದಾರೆ ರಚಿತಾರಾಮ್. ನಟಿ ರಚಿತಾ ಲಾಕ್​ಡೌನ್ ಸಮಯದಲ್ಲಿ ಕಾರ್ಯಕ್ರಮಗಳಿಲ್ಲದೇ ಆ್ಯಂಕರ್ ಆಗಿದ್ದಾರೆ ಅಂದುಕೊಂಡ್ರಾ. ಇಲ್ಲ ಇದು ಕೇವಲ ಪ್ರೋಮೋ.

ಕಲರ್ಸ್ ವಾಹಿನಿ ಜೂನ್ 1ರಿಂದ ಹೊಸ ಬಣ್ಣದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ಪ್ರೋಮೋ ವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ. ಎರಡು ತಿಂಗಳ ಲಾಕ್​ಡೌನ್ ಬಳಿಕ ಖಾಸಗಿ ವಾಹಿನಿಗಳು ಮನರಂಜನೆ ಕಾರ್ಯಕ್ರಮ, ಮುಖ್ಯವಾಗಿ ಧಾರಾವಾಹಿಗಳನ್ನು ಹೊಸ ಬಣ್ಣದಲ್ಲಿ ಪ್ರದರ್ಶಿಸಲು ಮುಂದಾಗಿವೆ. ಕಲರ್ಸ್ ಕನ್ನಡ ವಾಹಿನಿ ಹೊಸ ಕಾರ್ಯಕ್ರಮಗಳನ್ನು ಹಾಗೂ ಧಾರಾವಾಹಿಗಳನ್ನು ಯಾವ್ಯಾವ ಸಮಯದಲ್ಲಿ ಪ್ರಸಾರ ಮಾಡಲಿದೆ ಎಂಬುದನ್ನು ರಚಿತಾರಾಮ್ ನಿರೂಪಿಸಿದ್ದಾರೆ.

ಕಲರ್ಸ್ ವಾಹಿನಿ 'ಬಣ್ಣ ಹೊಸದಾಗಿದೆ: ಬಂಧ ಬಿಗಿಯಾಗಿದೆ' ಎಂಬ ಟ್ಯಾಗ್ ಲೈನ್ ಮೂಲಕ ಕಾರ್ಯಕ್ರಮಗಳನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ. ಮಿಥುನ ರಾಶಿ, ಮಂಗಳ ಗೌರಿ ಮದುವೆ, ಗೀತಾ, ಇವಳು ಸುಜಾತ, ಕನ್ನಡತಿ, ಮಜಾ ಟಾಕೀಸ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಸ ಬಣ್ಣದಲ್ಲಿ ಹಾಗೂ ಪ್ರೇಕ್ಷಕರನ್ನು ಮೆಚ್ಚಿಸುವ ರೀತಿಯಲ್ಲಿ ತೋರಿಸುವುದು ವಾಹಿನಿಯ ಸವಾಲಾಗಿದೆ. ಹೀಗಾಗಿ, ವಾಹಿನಿಯು ಹೊಸ ಪ್ರೋಮೋದೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ. ಕಳೆದ ಸೋಮವಾರದಿಂದ ಧಾರಾವಾಹಿಗಳ ಶೂಟಿಂಗ್ ಆರಂಭವಾಗಿದ್ದು, ಜೂನ್ 1ರಿಂದ ಹೊಸ ಎಪಿಸೋಡ್​ಗಳು ಪ್ರಸಾರವಾಗಲಿದೆ.

ಪ್ರೋಮೋ ಲಿಂಕ್​: https://www.instagram.com/tv/CAxZ733FlJu/?igshid=1pz36vzjkdpem

ETV Bharat Logo

Copyright © 2025 Ushodaya Enterprises Pvt. Ltd., All Rights Reserved.