ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳು ಕಳೆದಿದೆ. ಅಪ್ಪು ನಮ್ಮ ರಾಜ್ಯದಲ್ಲಿರುವ ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತಿನ ಕುರಿತಾಗಿ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಆ ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಕರುನಾಡಿನ ಕುರಿತಾಗಿ ಪುನೀತ್ ರಾಜ್‌ಕುಮಾರ್ ಸಿದ್ಧಪಡಿಸಿದ್ದ ವಿಶೇಷ ಡಾಕ್ಯುಮೆಂಟರಿಯ ಬಿಡುಗಡೆಯ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ ಎಂದು ಶೀರ್ಷೀಕೆ ಬರೆದು ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್ ಬರುವ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
-
ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ.
— Ashwini Puneeth Rajkumar (@ashwinipuneet) December 3, 2021 " class="align-text-top noRightClick twitterSection" data="
Appu’s epic dream project. A cinematic experience like never before.
Title Teaser on 6th December in @PRKAudio. @PuneethRajkumar @amoghavarsha @AJANEESHB @PRK_Productions @PRKAudio #mudskipper pic.twitter.com/GTWAZkysCg
">ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ.
— Ashwini Puneeth Rajkumar (@ashwinipuneet) December 3, 2021
Appu’s epic dream project. A cinematic experience like never before.
Title Teaser on 6th December in @PRKAudio. @PuneethRajkumar @amoghavarsha @AJANEESHB @PRK_Productions @PRKAudio #mudskipper pic.twitter.com/GTWAZkysCgಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ.
— Ashwini Puneeth Rajkumar (@ashwinipuneet) December 3, 2021
Appu’s epic dream project. A cinematic experience like never before.
Title Teaser on 6th December in @PRKAudio. @PuneethRajkumar @amoghavarsha @AJANEESHB @PRK_Productions @PRKAudio #mudskipper pic.twitter.com/GTWAZkysCg
ಕರ್ನಾಟಕ ರಾಜ್ಯದ ವನ್ಯ ಸಂಪತ್ತು, ಸಮುದ್ರ ಜೀವಿಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ಜೊತೆ ಸೇರಿ ಪುನೀತ್ ರಾಜ್‌ಕುಮಾರ್ ಸಿದ್ಧಪಡಿಸಿದ್ದರು. ಈ ಡಾಕ್ಯುಮೆಂಟರಿಗೆ ‘ಗಂಧದ ಗುಡಿ’ ಅಂತಾ ಹೆಸರಿಡಲು ಪುನೀತ್ ಮುಂದಾಗಿದ್ದರು.
90 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಅಪ್ಪು ಕೂಡ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಪುನೀತ್ ಕಾಡು ಸುತ್ತಿ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಕೂಡ ಮಾಡಿದ್ದರು.
ಪುನೀತ್ ರಾಜ್ ಕುಮಾರ್ ಸಾಯುವ ಮುನ್ನಾ ಈ ಡಾಕ್ಯುಮೆಂಟರಿ ಬಗ್ಗೆ ಕೊನೆಯದಾಗಿ ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೆ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ನಮ್ಮ ಕುಟುಂಬದಲ್ಲಿ ಶಿವರಾಮಣ್ಣ ಒಬ್ಬರಾಗಿದ್ದರು: ನಟ ಶಿವರಾಜ್ ಕುಮಾರ್