ETV Bharat / sitara

ಕಿರುತೆರೆಯಲ್ಲಿ ಪುನೀತ್ ನಿರ್ಮಾಣದ ಹೊಸ ಧಾರಾವಾಹಿ ಆರಂಭ - Poornima production Banner

ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ ವತಿಯಿಂದ ಪುನೀತ್ ರಾಜ್​ಕುಮಾರ್ ಹೊಸ ಧಾರಾವಾಹಿ ನಿರ್ಮಿಸಲು ಮುಂದಾಗಿದ್ದು ಈ ಧಾರಾವಾಹಿಗೆ 'ನೇತ್ರಾವತಿ' ಎಂದು ಹೆಸರಿಡಲಾಗಿದೆ. ಧಾರಾವಾಹಿ ಪ್ರಸಾರದ ಸಮಯ, ಧಾರಾವಾಹಿ ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

Puneet rajkumar
ಪುನೀತ್ ರಾಜ್​ಕುಮಾರ್
author img

By

Published : Mar 3, 2021, 10:04 AM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನಾಗಿ ಮಾತ್ರವಲ್ಲ, ಗಾಯಕರಾಗಿ, ನಿರೂಪಕರಾಗಿ, ನಿರ್ಮಾಪಕರಾಗಿ ಕೂಡಾ ಹೆಸರು ಮಾಡಿದ್ದಾರೆ. ತಮ್ಮ ಪಿಆರ್​​​ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಿಸಿರುವ ಪುನೀತ್ ಈಗ ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ ವತಿಯಿಂದ ಕಿರುತೆರೆಯಲ್ಲಿ ಹೊಸ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್ ನಿರ್ಮಿಸುತ್ತಿರುವ ಧಾರಾವಾಹಿಗೆ 'ನೇತ್ರಾವತಿ' ಎಂದು ಶೀರ್ಷಿಕೆ ಇಡಲಾಗಿದೆ. ಇದರ ಪ್ರೋಮೋವನ್ನು ಉದಯ ಟಿವಿ ಬಿಡುಗಡೆಮಾಡಿದೆ. ಇದೊಂದು ಭಕ್ತಿ ಪ್ರಧಾನ ಧಾರಾವಾಹಿಯಾಗಿದ್ದು, ಧಾರಾವಾಹಿ ಕಲಾವಿದರ ಬಗ್ಗೆ ಯಾವುದೇ ವಿಚಾರವನ್ನು ಬಹಿರಂಗಗೊಳಿಸಿಲ್ಲ. "ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್​​​ ವತಿಯಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಪ್ರಾರಂಭವಾಗುತ್ತಿದ್ದು ಇದೊಂದು ಭಕ್ತಿ ಪ್ರಧಾನ ಕಥೆಯಾಗಿದೆ ಎಂದು ಪುನೀತ್ ರಾಜಕುಮಾರ್ ತಿಳಿಸಿದ್ದಾರೆ. ಶೀಘ್ರವೇ ಈ ಧಾರಾವಾಹಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. 'ನೇತ್ರಾವತಿ' ಧಾರಾವಾಹಿಯನ್ನು ಸಂತೋಷ್ ಗೌಡ ನಿರ್ದೇಶಿಸುತ್ತಿದ್ದಾರೆ. ಪೂರ್ಣಿಮಾ ಪ್ರೊಡಕ್ಷನ್ಸ್​ ಬ್ಯಾನರ್​​​​​ನಿಂದ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ಧಾರಾವಾಹಿ ಇದಾಗಿದೆ.

Puneet rajkumar
ಹೊಸ ಧಾರಾವಾಹಿ 'ನೇತ್ರಾವತಿ'

ಇದನ್ನೂ ಓದಿ: ಕಿರುತೆರೆಯಿಂದ ಕರಿಯರ್ ಆರಂಭಿಸಿ ಲವ್ಲಿ ಸ್ಟಾರ್​ ಪ್ರೇಮ್​​​ಗೆ ನಾಯಕಿಯಾದ ಚೆಲುವೆ

ಕಿರುತೆರೆ ಪ್ರೇಕ್ಷಕರು ಹೊಸ ಸೀರಿಯಲ್​ ನೋಡಲು ಕಾಯುತ್ತಿದ್ದಾರೆ. 'ನೇತ್ರಾವತಿ' ಎಂಬ ಹೆಸರೇ ಸೂಚಿಸುವಂತೆ ಇದೊಂದು ಮಹಿಳಾ ಪ್ರಧಾನ ಧಾರಾವಾಹಿಯಾಗಿದೆ. ಉದಯ ಟಿವಿಯಲ್ಲಿ ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರ ವಾಗಲಿದೆ. ನೇತ್ರಾವತಿ ಎಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ನೆನಪಾಗಲೇಬೇಕು. ಮಂಜುನಾಥನ ಅಪ್ಪಟ ಭಕ್ತೆಯ ಕಥೆ ಈ ಧಾರಾವಾಹಿಯಲ್ಲಿ ಇರಲಿದೆಯಂತೆ. ಜೀವನದಲ್ಲಿ ಏನೇ ಕಷ್ಟ ಎದುರಾದರೂ ಮಂಜುನಾಥನ ಮೇಲೆ ನಂಬಿಕೆ ಇಟ್ಟಿರುವ ನೇತ್ರಾವತಿಯ ಬಗ್ಗೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವವರು ಯಾರು? ಯಾವ ಸಮಯಕ್ಕೆ “ನೇತ್ರಾವತಿ” ಪ್ರಸಾರ ಆಗಲಿದೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.