ETV Bharat / sitara

ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಚಪಾತಿ ಸದ್ದು: ಪ್ರಶಾಂತ್​-ಅರವಿಂದ್​ ಟಾಕ್​ವಾರ್​

ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಪ್ರಾರಂಭವಾದರೂ ಸಹ ಚಪಾತಿ ಗಲಾಟೆ ಮುಗಿದಿಲ್ಲ. ಇದೀಗ ಚಪಾತಿಗೆ ಹಿಟ್ಟು ಕಲಿಸುವ ಬಗ್ಗೆ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಮಾತಿನ ಚಕಮಕಿ ನಡೆದಿದೆ.

bbk8
ಪ್ರಶಾಂತ್​-ಅರವಿಂದ್​ ಟಾಕ್​ವಾರ್​
author img

By

Published : Jul 8, 2021, 9:15 AM IST

ಬಿಗ್​ಬಾಸ್ ಮನೆಯ ಕಿಚನ್​ನಲ್ಲಿ ಇದೀಗ ಹುಡುಗರದೇ ಹವಾ.‌ ಹೀಗಾಗಿ, ಚಪಾತಿ ಮಾಡುವ ವಿಷಯದಲ್ಲಿ ಅರವಿಂದ್ ಹಾಗೂ ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರಶಾಂತ್ ಸಂಬರಗಿ ಕಲಿಸಿದ ಚಪಾತಿ ಹಿಟ್ಟು ಗಟ್ಟಿಯಾಗಿತ್ತು. ಹೀಗಾಗಿ ಅರವಿಂದ್ ನಾನು ಮೊದಲೇ ಕಲಿಸಬೇಡಿ ಎಂದು ಹೇಳಿದ್ದೆ. ಆದರೆ, ನೀವು ಕಲಿಸದ್ದು ಗಟ್ಟಿಯಾಗಿದೆ. ಹೀಗಾಗಿ ಲಟ್ಟಿಸುವುದು ಕಷ್ಟವಾಗುತ್ತದೆ ಎಂದರು.

ನೀವು ನನ್ನ ಮಾತಾಗಲಿ ಅಥವಾ ಯಾರ ಮಾತನ್ನೂ ಸಹ ಕೇಳುವುದಿಲ್ಲ ಎಂದಾಗ, ಪ್ರಶಾಂತ್ ನಮ್ಮ ಮನೆಯಲ್ಲಿ ಓವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗಾದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ. ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು. ಆದರೆ, ಒತ್ತುವುದು ನಾವು. ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ ಎನ್ನುತ್ತಾರೆ.

ನಾನು ಮನೆಯಲ್ಲಿ ಕಳೆದ 20 ವರ್ಷಗಳಿಂದ ಚಪಾತಿ ಮಾಡುತ್ತಿದ್ದೇನೆ. ನನಗೇನು ಹೊಸದಲ್ಲ. ಎಸಿಯಲ್ಲಿ ಚಪಾತಿ ಹಿಟ್ಟು ಗಟ್ಟಿಯಾಗುತ್ತದೆ ಎಂದು ವೈಷ್ಣವಿ ಹೇಳಿದ್ದರು. ಹೀಗಾಗಿ ಒಳಗೆ ಇಟ್ಟಿದ್ದೆ ಎಂದರು. ಸರಿ ಇಲ್ಲ ಅಂದರೆ ಬಿಸಾಕೋಣ ಎಂದರು ಪ್ರಶಾಂತ್. ಇದಕ್ಕೆ ಅರವಿಂದ್ ಹಾಗೂ ದಿವ್ಯ ಉರುಡುಗ ಶಾಕ್ ಆದರು.

ನಂತರ ಅರವಿಂದ್, ಏನು ಹೇಳುತ್ತಿದ್ದೀರಾ? ಹೇಳಿದರೆ ಕೋಪ ಮಾಡಿಕೊಳ್ಳುತ್ತೀರಾ ಒಂದು ಮಾತು ಕೇಳುವುದಿಲ್ಲ. ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ ಎಂದು ಹೇಳುತ್ತಾರೆ.

ಮತ್ತೆ ಪ್ರಶಾಂತ್, ಆಯ್ತು ರಾಜಾ 23 ಸಲ ಹೇಳಿದ್ದನ್ನೇ ಹೇಳುತ್ತಿದ್ದೀಯ ನನಗೂ ಚಪಾತಿ ಮಾಡಿ ಅಭ್ಯಾಸವಿದೆ ಹೇಳುತ್ತಲೇ ಇರಬೇಡ ಎಂದರು. ಇದಕ್ಕೆ, ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಲಿಮಿಟೆಡ್ ದಿನಸಿ ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದೇ ಆಗಿದೆ ಪರವಾಗಿಲ್ಲ ಬಿಡಿ ಎನ್ನುತ್ತಾರೆ. ಈ ಬಗ್ಗೆ ಪ್ರಶಾಂತ್, ಚಕ್ರವರ್ತಿ ಬಳಿ ಅರವಿಂದ್ ಪದೇಪದೆ ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.