ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಇಂದು (ಶನಿವಾರ) ಸಂಜೆ ಆರಂಭವಾಗಲಿದೆ. ಮನೆಯ ಸದಸ್ಯರಿಗೆ ಬಿಗ್ಬಾಸ್ನಿಂದ ಹೊರ ಹೋದ ನಂತರದ ಚಿಂತೆ, ಅಲ್ಲದೆ ಸ್ಪರ್ಧಿಗಳು ತಮ್ಮ ಪಯಣದ ಬಗ್ಗೆ ಮೆಲುಕು ಹಾಕುತ್ತ, ಕೆಲವೇ ಗಂಟೆಗಳು ಬಾಕಿ ಉಳಿದಿರುವುದನ್ನು ನೆನೆಸಿಕೊಳ್ಳುತ್ತ ಸಮಯ ಕಳೆದಿದ್ದಾರೆ.
ಹಾವು - ಮುಂಗುಸಿಯಂತಿದ್ದ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಅವರು ಕೊನೆಯ ಎರಡು ದಿನಗಳಿಂದ ಆತ್ಮೀಯರಾಗಿದ್ದಾರೆ. ಇದೇ ಸಲುಗೆಯನ್ನು ಬಳಸಿಕೊಂಡ ಪ್ರಶಾಂತ್, ಮಂಜುಗೆ ಸಿನಿಮಾಗೆ ಸಂಬಂಧಿಸಿದ ಸಲಹೆಯೊಂದನ್ನು ನೀಡಿದ್ದಾರೆ.
ಮಂಜು ನೀವು ಕಾಮಿಡಿಯನ್ ಆಗುವ ಬದಲು ವಿಲನ್ ಪಾತ್ರ ಮಾಡಬೇಕು. ನೆಗೆಟಿವ್ ಶೇಡ್ ಮಾಡಬಹುದು, ಕಾಮಿಡಿಯನ್‍ಗಿಂತ ನಿನ್ನ ಲುಕ್ಸ್ ನೆಗೆಟಿವ್ ಪಾತ್ರಕ್ಕೆ ಹೊಂದಾಣಿಕೆಯಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಮಂಜು, ಹೌದು ಸರ್.. ನನಗೆ ವಿಲನ್ ಪಾತ್ರ ತುಂಬಾ ಇಷ್ಟ ಎಂದಿದ್ದಾರೆ. ಅಲ್ಲದೇ, ಗ್ರಾಮೀಣ ಸೊಗಡಿನ ಕಥೆಗಳಲ್ಲಿ ಹಾಗೂ ಟೌನ್ ಬ್ಯಾಕ್‍ಡ್ರಾಪ್ ಕಥೆಗೆ ವಿಲನ್ ಪಾತ್ರ ಮಾಡಬಹುದು ಎಂದು ಪ್ರಶಾಂತ್ ಮತ್ತೊಮ್ಮೆ ಸಲಹೆ ಕೊಟ್ಟಿದ್ದಾರೆ.

ಆಗ ಮಂಜು, ನನಗೆ ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡಲು ತುಂಬಾ ಆಸೆ, ಅಂತಹದ್ದೇ ಪಾತ್ರಗಳನ್ನು ಮಾಡಬೇಕು. ಅದು ನನ್ನ ದೊಡ್ಡ ಕನಸು. ನಾನು ಇಂಡಸ್ಟ್ರಿಗೆ ಬಂದಿದ್ದೇ ಅದಕ್ಕಾಗಿ ಎಂದು ಮಂಜು ಹೇಳಿದರು. ಈ ಮೂಲಕ ಮಂಜು ಪಾವಗಡ ತಮ್ಮ ಸಿನಿಮಾದಲ್ಲಿ ತಾವು ಮಾಡಬೇಕೆಂದಿರುವ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss: 'ಆಲ್ ದಿ ಬೆಸ್ಟ್' ಎಂದು ಶಿವಣ್ಣ ವಿಶ್... ಕೊನೆಗೂ ಈಡೇರಿತು ಮಂಜು ಆಸೆ!