ಕುಲವಧು ಧಾರಾವಾಹಿಯಲ್ಲಿ ವಿಲನ್ ಕಾಂಚನಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಸುಪ್ರೀತಾ ಶೆಟ್ಟಿ ಎಲ್ಲೇ ಹೋದರೂ ಜನ ಅವರನ್ನು ಗುರುತಿಸುವುದು ಕಾಂಚನಾಳಾಗಿ. ವಿಲನ್ ಆಗಿ ಮೋಡಿ ಮಾಡಿದ್ದ ಸುಪ್ರೀತಾ ಶೆಟ್ಟಿ ಕಳೆದ ವರ್ಷ ನವೆಂಬರ್ 20 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.
ಇದೀಗ ತಮ್ಮ ಮುದ್ದು ಮಗನಿಗೆ ಏಳು ತಿಂಗಳುಗಳು ತುಂಬಿದ್ದು, ಸುಪ್ರೀತಾ ಇದೇ ಮೊದಲ ಬಾರಿಗೆ ತಮ್ಮ ರಾಜಕುಮಾರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿಯ ಮುದ್ದಿನ ಮಗನನ್ನು ಕಂಡು ವೀಕ್ಷಕರು ಫಿದಾ ಆಗುವುದಂತೂ ಗ್ಯಾರಂಟಿ.
ಈ ಕುರಿತಂತೆ 'ಈಟಿವಿ ಭಾರತ' ಜೊತೆ ಮಾತನಾಡಿದ ಸುಪ್ರೀತಾ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಹೆಸರಿಟ್ಟಿದ್ದು ಮಗಳು ಇಬ್ಬನಿ!
ಸುಪ್ರೀತಾ ಅವರ ಮಗನ ಹೆಸರು ಮನ್ವಿತ್ ಶೆಟ್ಟಿ. ಅಂದ ಹಾಗೇ ಈ ಹೆಸರನ್ನು ಇಟ್ಟಿದ್ದು ಬೇರಾರೂ ಅಲ್ಲ, ಸುಪ್ರೀತಾ ಅವರ ಹಿರಿ ಮಗಳು ಇಬ್ಬನಿ. ಮನ್ವಿತ್ ಎಂದು ಹೆಸರಿಡೋಣ ಎಂದು ಮಗಳು ಇಬ್ಬನಿ ಹೇಳಿದಾಗ ಹಿಂದು ಮುಂದು ನೋಡದೇ ಅಸ್ತು ಎಂದ ಸುಪ್ರೀತಾ-ಪ್ರಮೋದ್ ದಂಪತಿ ಸದ್ಯ ಮುದ್ದು ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಮುದ್ದು ರಾಜಕುಮಾರ ಮನ್ವಿತ್ ನಮ್ಮ ಮನೆಯ ಮುದ್ದಿನ ಮೊಮ್ಮಗ. ಯಾಕೆಂದರೆ ನಮ್ಮ ಮನೆಯಲ್ಲಿರುವ ಆರು ಜನ ಮೊಮ್ಮಕ್ಕಳ ಪೈಕಿ ಐದು ಜನ ಹೆಣ್ಣು ಮೊಮ್ಮಕ್ಕಳು. ಮನ್ವಿತ್ ಮಾತ್ರ ಮೊಮ್ಮಗ. ಆದ ಕಾರಣ ಅವನ ಮೇಲೆ ಎಲ್ಲರಿಗೂ ಒಂದು ರೀತಿಯ ವಿಶೇಷ ಪ್ರೀತಿ ಇದೆ. ಅದರಲ್ಲೂ ನಮ್ಮ ಮಾವನಿಗಂತೂ ಇವನು ಬಹು ಪ್ರೀತಿಯ ಮೊಮ್ಮಗ ಎನ್ನುತ್ತಾರೆ ಸುಪ್ರೀತಾ.
ಸದ್ಯ ನಟನಾ ಪ್ರಪಂಚದಿಂದ ದೂರವಿರುವ ಸುಪ್ರೀತಾ ಅವರು ಕೂಡಾ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.