ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸುತ್ತಿರುವ ಮುದ್ದು ಮುಖದ ಚೆಲುವೆಯ ಹೆಸರು ಪಲ್ಲವಿ ಗೌಡ. ಕನ್ನಡದ ಜೊತೆಗೆ ಮಲಯಾಳಂ ಧಾರಾವಾಹಿಯಲ್ಲೂ ನಟಿಸುತ್ತಿರುವ ಕಾರಣ ಪಲ್ಲವಿ ಈಗ ಬಹಳ ಬ್ಯುಸಿ.
- " class="align-text-top noRightClick twitterSection" data="
">
ಇನ್ನು ಪ್ರತಿದಿನದ ಶೂಟಿಂಗ್ ಕೆಲಸಗಳ ನಡುವೆ ಸ್ವಲ್ಪ ಬಿಡುವು ದೊರೆತರೂ ಸಾಕು ಆ್ಯಕ್ಟರ್ಗಳಿಗೆ ಎಲ್ಲಾದರೂ ರಿಲ್ಯಾಕ್ಸ್ ಮಾಡಿ ಬರೋಣ ಎನ್ನಿಸುವುದು ಗ್ಯಾರಂಟಿ. ಇದೀಗ ಪಲ್ಲವಿ ಗೌಡ ಶೂಟಿಂಗ್ನಿಂದ ಕೆಲವು ದಿನಗಳ ಕಾಲ ಬ್ರೇಕ್ ಪಡೆದು ಗೋ..ಗೋ..ಗೋವಾ ಎನ್ನುತ್ತಿದ್ದಾರೆ. ಗೋವಾ ತೆರಳಿ ಎಂಜಾಯ್ ಮಾಡುತ್ತಿರುವ ಪಲ್ಲವಿ 'ಗೋವಾ ಎಂದರೆ ಸಂತೋಷ, ಗೋವಾ ಎಂದರೆ ಸನ್ ಶೈನ್, ಮಾತ್ರವಲ್ಲ, ಗೋವಾ ಹೆಸರು ಕೇಳಿದೊಡನೆ ಮನಸ್ಸು ಒಂದು ಕ್ಷಣ ರಿಲ್ಯಾಕ್ಸ್ ಆಗಿಬಿಡುತ್ತದೆ ಎಂದು ಗೋವಾವನ್ನು ಹೊಗಳಿದ್ದಾರೆ. ಗೋವಾದ ಕಡಲತೀರದಲ್ಲಿ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">