ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ನಟಿಸುತ್ತಿದ್ದ ಪಲ್ಲವಿ ಗೌಡ ಇದೀಗ ಧಾರಾವಾಹಿಯಿಂದ ಹೊರಬಂದಿದ್ದಾರೆ. 'ಸೇವಂತಿ' ಪಾತ್ರಕ್ಕೆ ಗುಡ್ ಬೈ ಹೇಳಿರುವ ಪಲ್ಲವಿ ಗೌಡ ಇನ್ನು ಮುಂದೆ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಗಗನಸಖಿಯಾಗಿ ಬಾನೆತ್ತರ ಹಾರಾಡಬೇಕು ಎಂದು ಬಯಸಿದ್ದ ಪಲ್ಲವಿ ಆಗಿದ್ದು ಜನಪ್ರಿಯ ನಟಿ. ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಛಾಪು ಮೂಡಿಸಿರುವ ಮುದ್ದು ಮುಖದ ಚೆಲುವೆ ಪಲ್ಲವಿ 'ಮನೆಯೊಂದು ಮೂರು ಬಾಗಿಲು', 'ಗಾಳಿಪಟ', 'ಚಂದ್ರಚಕೋರಿ', 'ಪರಿಣಯ', 'ಜೋಡಿಹಕ್ಕಿ', ತೆಲುಗಿನ 'ಪಸುಪು ಕುಂಕುಮ' ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಕನ್ನಡ ಮಾತ್ರವಲ್ಲ, ತೆಲುಗು ಪ್ರೇಕ್ಷಕರಿಗೆ ಕೂಡಾ ಪರಿಚಿತರಾಗಿದ್ದಾರೆ. ಕಿರುತೆರೆಯ ಅತ್ಯಂತ ಬೇಡಿಕೆ ನಟಿಯರ ಸಾಲಿಗೆ ಸೇರಿರುವ ಪಲ್ಲವಿ ಗೌಡ, ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಿರುವುದು ಕಿರುತೆರೆ ವೀಕ್ಷಕರಿಗೆ ಶಾಕ್ ನೀಡಿದೆ.

'ಸೇವಂತಿ' ಧಾರಾವಾಹಿಯಲ್ಲಿ ಸೇವಂತಿ ಹಾಗೂ ಶಿಶಿರ್ ಅವರ ಮುದ್ದಾದ ಜೋಡಿಗೆ ವೀಕ್ಷಕರು ಫಿದಾ ಆಗಿದ್ದರು. ಇದೀಗ 'ಸೇವಂತಿ' ಪಾತ್ರ ಬದಲಾಗುವ ಸಮಯ ಬಂದಿದೆ. ಧಾರಾವಾಹಿಯಿಂದ ಹೊರಬಂದಿರುವುದಕ್ಕೆ ಅದಕ್ಕೆ ಪಲ್ಲವಿ ಅವರು ಸಕಾರಣವನ್ನು ಕೂಡಾ ನೀಡಿದ್ದಾರೆ. ಧಾರಾವಾಹಿಯಲ್ಲಿ ಕೆಲಸದ ಒತ್ತಡ ತುಂಬಾ ಹೆಚ್ಚಾಗಿತ್ತು. ನನಗೆ ಸೆಟ್ನಲ್ಲಿ ಕಂಫರ್ಟ್ ಇರಲಿಲ್ಲ. ಆದ ಕಾರಣ ಆ ಧಾರಾವಾಹಿಗೆ ಗುಡ್ ಬೈ ಹೇಳಿದೆ. ಇನ್ನೇನಿದ್ದರೂ ನಾನು ಸಿನಿಮಾದತ್ತ ಹೆಚ್ಚು ಗಮನ ನೀಡುತ್ತೇನೆ ಎಂದಿದ್ದಾರೆ ಪಲ್ಲವಿ.