ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ಇದುವರೆಗೂ ಮೀನಾಕ್ಷಮ್ಮ ಪಾತ್ರ ನಿರ್ವಹಿಸುತ್ತಿದ್ದ ಪವಿತ್ರಾ ಲೋಕೇಶ್ ಧಾರಾವಾಹಿಯಿಂದ ಹೊರಹೋಗಿದ್ದಾರೆ. ಪವಿತ್ರ ಜಾಗಕ್ಕೆ ಪದ್ಮಜಾ ರಾವ್ ಬಂದಿದ್ದಾರೆ.
ಆಗಸ್ಟ್ 19ರಿಂದ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ಇನ್ನು 2 ಎಪಿಸೋಡ್ಗಳು ಪ್ರಸಾರವಾಗುವ ಮುನ್ನವೇ ಈ ವಿಚಾರ ಹೊರಬಿದ್ದಿದೆ. ಆದರೆ ಪವಿತ್ರಾ ಲೋಕೇಶ್ ಈ ಧಾರಾವಾಹಿಯಿಂದ ಹೊರ ಹೋಗಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಧಾರಾವಾಹಿಯಲ್ಲಿ ಮೀನಾಕ್ಷಮ್ಮ ಪಾತ್ರಕ್ಕೆ ಕೂಡಾ ಹೆಚ್ಚು ಪ್ರಾಮುಖ್ಯತೆ ಇದ್ದು, ಇನ್ನು ಮುಂದೆ ಪದ್ಮಜಾ ರಾವ್ ಈ ಪಾತ್ರ ನಿಭಾಯಿಸಲಿದ್ದಾರೆ. ಇದೊಂದು ಪರಿಪೂರ್ಣ ಕೌಟುಂಬಿಕ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶನಿವಾರದವರೆಗೂ ರಾತ್ರಿ 9ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮೀನಾಕ್ಷಮ್ಮ ಎಂದರೆ ಊರಿಗೆ ಊರೇ ಗೌರವ ಕೊಡುತ್ತದೆ. ಈ ಮೀನಾಕ್ಷಮ್ಮನಿಗೆ ಒಬ್ಬನೇ ಮಗ ಅರ್ಜುನ್. ಈತ ಅಪಘಾತವೊಂದರಲ್ಲಿ ಕಾಲಿನ ಶಕ್ತಿ ಕಳೆದುಕೊಳ್ಳುತ್ತಾನೆ. ಮಗನ ಪರಿಸ್ಥಿತಿ ಕಂಡು ಮೀನಾಕ್ಷಮ್ಮ ವ್ಯಥೆ ಪಡುವಾಗ ತನ್ನ ಕನಸುಗಳನ್ನು ಕಟ್ಟಿಟ್ಟು ಈ ಮನೆ ಏಳಿಗೆಗಾಗಿ ಬರುವ ಮೀರಾಳ ಕಥೆಯೇ 'ಅರಮನೆ ಗಿಳಿ'.