ETV Bharat / sitara

ಡಬ್ಬಿಂಗ್ ಧಾರಾವಾಹಿಗಳ ನಡುವೆ ಪ್ರಸಾರವಾಗಲಿದೆ ಭಕ್ತಿ ಪ್ರಧಾನ ಸ್ವಮೇಕ್ ಧಾರಾವಾಹಿ - Cm going to release serial trailer

ನವೀನ್ ಕೃಷ್ಣ, 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ' ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಈ ಧಾರಾವಾಹಿಯ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

Edeyuru siddalingeshwara serial
ಎಡೆಯೂರು ಶ್ರೀ ಸಿದ್ದಲಿಂಗೇಶ್ವರ
author img

By

Published : Nov 12, 2020, 3:57 PM IST

ಡಬ್ಬಿಂಗ್ ಧಾರಾವಾಹಿಗಳ ಹಾವಳಿ ನಡುವೆ ಕನ್ನಡಿಗರೇ ನಿರ್ದೇಶಿಸುತ್ತಿರುವ ಭಕ್ತಿಪ್ರಧಾನ ಧಾರಾವಾಹಿಯೊಂದು ಕಿರುತೆರೆ ವೀಕ್ಷಕರನ್ನು ರಂಜಿಸಲು ಬರಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ' ಎಂಬ ಧಾರಾವಾಹಿ ಪ್ರಸಾರವಾಗಲಿದೆ.

Edeyuru sri siddalingeshwara
'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ'

ಈ ಧಾರಾವಾಹಿಯನ್ನು ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಶ್ರೀ ಸಿದ್ದಲಿಂಗೇಶ್ವರ ಅವರ ಜೀವನ ಆಧಾರಿತ ಕಥೆ ಹಾಗೂ ಎಡೆಯೂರಿನಲ್ಲಿ ನಡೆದ ಸತ್ಯ ಘಟನೆಗಳ ಆಧಾರಿತ ಚಿತ್ರ ಇದಾಗಿದೆ. ಧಾರಾವಾಹಿಯಲ್ಲಿ ಸಿದ್ದಲಿಂಗೇಶ್ವರ ಬಾಲ್ಯದ ಪಾತ್ರದಲ್ಲಿ ಬಾಲನಟ ಸಮರ್ಥ್ ಬಣ್ಣ ಹಚ್ಚುತ್ತಿದ್ದಾರೆ. ಸಿದ್ದಲಿಂಗೇಶ್ವರನಾಗಿ ಕಿರುತೆರೆ ನಟ ವಲ್ಲಭ್ ನಟಿಸುತ್ತಿದ್ದಾರೆ. ಸಿದ್ದಲಿಂಗೇಶ್ವರ ತಾಯಿ ಪಾತ್ರದಲ್ಲಿ ಹರ್ಷಲ್ ಹಾಗೂ ತಂದೆ ಪಾತ್ರದಲ್ಲಿ ಹರೀಶ್ ನಟಿಸುತ್ತಿದ್ದಾರೆ.

Edeyuru sri siddalingeshwara
ಬಾಲನಟ ಸಮರ್ಥ್
Edeyuru sri siddalingeshwara
'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿಯಲ್ಲಿ ಹರೀಶ್, ಹರ್ಷಲ

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯ ಟ್ರೇಲರ್ ಲಾಂಚ್ ಮಾಡಲಿದ್ದಾರೆ. ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಈಗಾಗಲೇ ಗಿರಿಜಾ ಕಲ್ಯಾಣ ಹಾಗೂ ಉಘೇ ಉಘೇ ಮಾದೇಶ್ವರ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಲಾಕ್​​ಡೌನ್​ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳ ಪ್ರಸಾರ ಹೆಚ್ಚಾಗಿದ್ದು ಈ ನಡುವೆ ಈ ಸ್ವಮೇಕ್ ಧಾರಾವಾಹಿ ವೀಕ್ಷಕರ ಮನಸ್ಸನ್ನು ಹೇಗೆ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕು.

Edeyuru sri siddalingeshwara
ನವೀನ್ ಕೃಷ್ಣ ನಿರ್ದೇಶನದ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.