100 ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಸದ್ಯ, 'ಶಿವಾಜಿ ಸುರತ್ಕಲ್ 2' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ತಂಡಕ್ಕೆ ದಕ್ಷಿಣ ಭಾರತದ ಪ್ರಖ್ಯಾತ ನಟ ನಾಸರ್ ಅವರು ಸೇರ್ಪಡೆಯಾಗಿದ್ದಾರೆ.
ನಾಸರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನ ಚಿತ್ರತಂಡ ಹಂಚಿಕೊಂಡಿದೆ. ಶಿವಾಜಿ ಸುರತ್ಕಲ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇವರ ಪಾತ್ರದ ಹೆಸರು ವಿಜೇಂದ್ರ ಸುರತ್ಕಲ್. ತಂದೆ-ಮಗನ ಬಾಂಧವ್ಯವದ ಬಗ್ಗೆ ಹೇಳುವ ಪಾತ್ರ ಇದಾಗಿದೆ.
ಇದನ್ನೂ ಓದಿ: ಸರಳವಾಗಿ ಸೆಟ್ಟೇರಿದ ರಮೇಶ್ ಅರವಿಂದ್ 103ನೇ ಸಿನಿಮಾ ''ಶಿವಾಜಿ ಸುರತ್ಕಲ್ 2''
ಬಹಳ ವರ್ಷಗಳ ಕಾಲದಿಂದ ರಮೇಶ್ ಅರವಿಂದ್ ಮತ್ತು ನಾಸರ್ ಒಬ್ಬರಿಗೊಬ್ಬರು ಪರಿಚಯ ಇದ್ದರೂ, ಇದೇ ಮೊದಲ ಬಾರಿಗೆ ಇಬ್ಬರೂ ಜತೆಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ರಮೇಶ್ ಅರವಿಂದ್ ಅವರ 103ನೇ ಚಿತ್ರ ಎನ್ನುವುದು ಇನ್ನೊಂದು ವಿಶೇಷ.
ಡಿ. 13ರಿಂದ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ರೇಖಾ.ಕೆ. ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಮತ್ತು ವಿನಾಯಕ್ ಜೋಷಿ ತಾರಾಗಣದಲ್ಲಿದ್ದಾರೆ.
ಗುರುಪ್ರಸಾದ್ ಎಂ.ಜಿ ಅವರ ಛಾಯಾಗ್ರಹಣ ಹಾಗೂ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ 2022ರ ಜನವರಿ ಕೊನೆಯಲ್ಲಿ ಮುಗಿಯುತ್ತದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಾಜಿ ಸುರತ್ಕಲ್-2 ಪೋಸ್ಟರ್ ಬಿಡುಗಡೆ.. ಡಿಟೆಕ್ಟರ್ ಆಗಿ ಕಥೆ ಹೇಳಲಿದ್ದಾರೆ ರಮೇಶ್ ಅರವಿಂದ್..