ETV Bharat / sitara

ಕಿರುತೆರೆ ವೀಕ್ಷಕರಿಗೆ ಸಿಹಿಸುದ್ದಿ...ನಾಗಿಣಿ-2 ಪ್ರಸಾರಕ್ಕೆ ದಿನಾಂಕ ಫಿಕ್ಸ್​​​​ - ಫೆಬ್ರವರಿ 17 ರಿಂದ ಪ್ರಸಾರ ಆರಂಭಿಸಲಿದೆ ನಾಗಿಣಿ 2

'ನಾಗಿಣಿ-2' ಧಾರಾವಾಹಿಯಲ್ಲಿ ನಾಗಿಣಿಯಾಗಿ ನಮ್ರತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮುನ್ನ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಹಿಮಾ ಆಗಿ ಪ್ರೇಕ್ಷಕರಿಗೆ ಪರಿಚಯವಾಗಿದ್ದ ನಮ್ರತಾ ಇದೀಗ ನಾಗಿಣಿಯಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ. ನಾಗರಾಜನಾಗಿ ಮಾಜಿ ಬಿಗ್​​ಬಾಸ್ ಸ್ಪರ್ಧಿ, 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಸೂಪರ್ ಸ್ಟಾರ್ ಜೆಕೆ ಖ್ಯಾತಿಯ ಜಯರಾಂ ಕಾರ್ತಿಕ್ ನಟಿಸುತ್ತಿದ್ದಾರೆ.

Nagini 2
ನಾಗಿಣಿ-2
author img

By

Published : Feb 7, 2020, 1:24 PM IST

ಎರಡು ತಿಂಗಳಿಂದ ಸದ್ದು ಮಾಡಿದ್ದ 'ನಾಗಿಣಿ-2' ಧಾರಾವಾಹಿ ಇದೇ ತಿಂಗಳು 17 ರಿಂದ ಪ್ರಸಾರ ಆರಂಭಿಸಲಿದೆ. ಹಯವದನ ನಿರ್ದೇಶನದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ' ಇತ್ತೀಚೆಗಷ್ಟೇ ಸಾವಿರ ಸಂಚಿಕೆಗಳನ್ನು ಪೂರೈಸಿದ್ದು ಮುಂದಿನ ವಾರ ಮುಕ್ತಾಯಗೊಳ್ಳಲಿದೆ. ತಮ್ಮ ಇಷ್ಟದ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು.

ನಾಗಿಣಿ 2 ಪ್ರೋಮೋ ( ವಿಡಿಯೋ ಕೃಪೆ: ಜೀ ಕನ್ನಡ)

ಇದೀಗ ರಾಮ್ ಜಿ ಅವರು 'ನಾಗಿಣಿ-2' ನಿರ್ದೇಶನ ಮಾಡುತ್ತಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಜೀ ಕನ್ನಡಕ್ಕಾಗಿ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯನ್ನು ನಿರ್ದೇಶಿಸಿದ್ದ ರಾಮ್ ಜಿ ನಂತರ ಬೇರೆ ವಾಹಿನಿಯತ್ತ ಮುಖ ಮಾಡಿದರು. ಇದೀಗ ನಾಗಿಣಿ-2 ನಿರ್ದೇಶಿಸುವ ಮೂಲಕ ಮತ್ತೆ ಜೀ ಕನ್ನಡ ವಾಹಿನಿಗೆ ರಾಮ್ ಜಿ ಮರಳಿ ಬಂದಿದ್ದಾರೆ. ರಾಮ್ ಜಿ ವಾಪಸ್ ಬಂದಿರುವುದು ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಖುಷಿಯಾಗಿದೆ.

PC: Zee Kannada
ಜಯರಾಮ್ ಕಾರ್ತಿಕ್ (ಪೋಟೋ ಕೃಪೆ: ಜೀ ಕನ್ನಡ)

'ನಾಗಿಣಿ-2' ಧಾರಾವಾಹಿಯಲ್ಲಿ ನಾಗಿಣಿಯಾಗಿ ನಮ್ರತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮುನ್ನ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಹಿಮಾ ಆಗಿ ಪ್ರೇಕ್ಷಕರಿಗೆ ಪರಿಚಯವಾಗಿದ್ದ ನಮ್ರತಾ ಇದೀಗ ನಾಗಿಣಿಯಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ. ನಾಗರಾಜನಾಗಿ ಮಾಜಿ ಬಿಗ್​​ಬಾಸ್ ಸ್ಪರ್ಧಿ, 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಸೂಪರ್ ಸ್ಟಾರ್ ಜೆಕೆ ಖ್ಯಾತಿಯ ಜಯರಾಂ ಕಾರ್ತಿಕ್ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಅವರದ್ದು ಅತಿಥಿ ಪಾತ್ರವಾಗಿದ್ದು ಆರಂಭದ ಸಂಚಿಕೆಯಲ್ಲಿ ಮಾತ್ರ ಅವರನ್ನು ಕಾಣಬಹುದಾಗಿದೆ. ಈಗಾಗಲೇ ಜೀ ವಾಹಿನಿ ನಾಗಿಣಿ-2 ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತಮ್ಮ ನೆಚ್ಚಿನ ನಾಗಿಣಿ-2 ಸಂಚಿಕೆಯನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.