ಜೀ ಕನ್ನಡ ವಾಹಿನಿಯಲ್ಲಿ ದೀಪಿಕಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ನಾಗಿಣಿ' ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯವಾಗಿತ್ತು. ಇನ್ನು ದೀಪಿಕಾ ದಾಸ್ ಕೂಡಾ ಬಿಗ್ಬಾಸ್-7 ಸೀಸನ್ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಾಗಿಣಿ-2 ಆರಂಭವಾಗಲಿದೆ.
- View this post on Instagram
ನಾಗಲೋಕದ ಸೇಡು ಮತ್ತೊಮ್ಮೆ ಭೂಮಿಗೆ ಬರ್ತಿದೆ! ನಾಗಿಣಿ 2 ಶೀಘ್ರದಲ್ಲಿ. #ZeeKannada #Naagini2 #ComingSoon
">
'ಪುಟ್ಟ ಗೌರಿ ಮದುವೆ' ಧಾರಾವಾಹಿ ನಿರ್ದೇಶಕ ರಾಮ್ ಜೀ ಸದ್ಯಕ್ಕೆ 'ಮಂಗಳ ಗೌರಿ ಮದುವೆ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಇದೀಗ ರಾಮ್ ಜೀ ನಾಗಿಣಿ-2 ಹೊಸ ಧಾರಾವಾಹಿಯನ್ನು ನಿರ್ದೇಶಿಸಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಯವದನ ನಿರ್ದೇಶನದ ಯಶಸ್ವಿ ಧಾರಾವಾಹಿ ನಾಗಿಣಿ ಇತ್ತೀಚೆಗಷ್ಟೇ ಮುಕ್ತಾಯವಾಗಿತ್ತು. ಇದೀಗ ರಾಮ್ ಜೀ ನಿರ್ದೇಶನದಲ್ಲಿ ನಾಗಿಣಿ-2 ಬರಲಿದೆ. ಈ ಧಾರಾವಾಹಿ ಮುಂದಿನ ತಿಂಗಳಿನಿಂದ ಪ್ರಸಾರವಾಗಲಿದೆ. ಜೀ ಕನ್ನಡದಲ್ಲಿ 'ರಾಧಾ ಕಲ್ಯಾಣ' ನಿರ್ದೇಶಿಸಿದ್ದ ರಾಮ್ ಜೀ ಈಗ ನಾಗಿಣಿ -2 ಮೂಲಕ ಮತ್ತೆ ಜೀ ಕನ್ನಡದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಗಗನ್ ಎಂಟರ್ಪ್ರೈಸಸ್ ಅಡಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.