ವರ್ಷದ ಮೊದಲ ಹಬ್ಬ ಸಂಕ್ರಾಂತಿ. ನಾಡಿನಾದ್ಯಂತ ಬಹಳ ಸಡಗರ, ಸಂಭ್ರಮದಿಂದ ಆಚರಿಸುವ ಮಕರ ಸಂಕ್ರಾಂತಿ ರೈತರ ಹಬ್ಬ ಎಂದರೆ ತಪ್ಪಲ್ಲ. ಪೈರು ಕಟಾವು ಮಾಡುವ ಸಮಯದಲ್ಲಿ ಆಚರಿಸುವ ಹಬ್ಬ ಇದು. ಈ ಹಬ್ಬದಲ್ಲಿ ಜಾನುವಾರುಗಳಿಗೆ ಅಲಂಕರಿಸಿ ಕಿಚ್ಚು ಕೂಡಾ ಹಾಯಿಸಲಾಗುತ್ತದೆ.
- " class="align-text-top noRightClick twitterSection" data="
">
ಸಂಕ್ರಾಂತಿ ದಿನ ನೆರೆಹೊರೆಯವರಿಗೆ ಎಳ್ಳು-ಬೆಲ್ಲ ಹಂಚುವ ಸಂಪ್ರದಾಯ ಕೂಡಾ ಇದೆ. ಸಾಮಾನ್ಯರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಈ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಸಂಕ್ರಾಂತಿ ಶುಭಾಶಯ ಕೂಡಾ ಕೋರಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಪಾರು' ಧಾರಾವಾಹಿಯ ಪಾರ್ವತಿ ಅಲಿಯಾಸ್ ಮಂಗಳೂರು ಚೆಲುವೆ ಮೋಕ್ಷಿತ ಕೂಡಾ ಸಂಕ್ರಾಂತಿ ಆಚರಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಅಲ್ಲದೆ ಸುಂದರವಾಗಿ ಅಲಂಕಾರ ಮಾಡಿಕೊಂಡು ಕಬ್ಬು ಹಾಗೂ ಎಳ್ಳು, ಬೆಲ್ಲ ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ. ಬಾದಾಮಿ ಬಣ್ಣದ ನೆಟೆಡ್ ಬ್ಲೌಸ್, ಕೆಂಪು ಬಣ್ಣ ದ ಲಂಗ ಹಾಗೂ ಹಸಿರು ಬಣ್ಣದ ದಾವಣಿಯೊಂದಿಗೆ ಒಡವೆ ಧರಿಸಿರುವ ಮೋಕ್ಷಿತ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಈ ಪೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೋಕ್ಷಿತಾ ಹಂಚಿಕೊಂಡಿದ್ದಾರೆ.